ಬೆಂಗಳೂರು : ಪ್ರವಾಹದಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎನ್ನಲಾಗಿದೆ.
ನೆರೆಯಿಂದ 38 ಸಾವಿರ ಕೋಟಿಗೂ ಅಧಿಕ ಪ್ರಮಾಣದ ನಷ್ಟ ಆಗಿದೆ. 2.50 ಲಕ್ಷ ಮನೆಗಳು ನೆಲಕಚ್ಚಿವೆ. ಆದ್ದರಿಂದ ಕನಿಷ್ಟ 3,500 ಕೋಟಿ ಪರಿಹಾರದ ನೆರವು ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರದ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಆದರೆ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಪ್ರಸ್ತಾವನೆ, ಕೇಂದ್ರ ಅಧ್ಯಯನಗಳೊಂದಿಗೆ ತಾಳೆಯಾಗುತ್ತಿಲ್ಲ. ಕೇಂದ್ರ ಅಧ್ಯಯನ ತಂಡದ ಪ್ರಕಾರ 1.15 ಲಕ್ಷ ಮನೆಗಳು ನೆಲಕಚ್ಚಿವೆ. ಕುಸಿದ ಮನೆಗಳೆಲ್ಲವೂ 5 ಲಕ್ಷ ರೂ ಬೆಲೆ ಬಾಳುತ್ತದೆಯೇ? ಎಂದು ಕೇಂದ್ರದ ಅಧಿಕಾರಿಗಳಿಂದ ರಾಜ್ಯದ ಅಧಿಕಾರಿಗಳನ್ನು ತರಾಟೆಗೆ ತೆಗೆದಕೊಳ್ಳಲಾಗಿದೆ ಎನ್ನಲಾಗಿದೆ. ಕೂಡಲೇ ಈ ಕುರಿತು ಸ್ಪಷ್ಟಿಕರಣ ನೀಡಬೇಕು ಎಂದು ಕೇಂದ್ರವು ರಾಜ್ಯಕ್ಕೆ ಸೂಚಿಸಿದೆ ಎನ್ನಲಾಗಿದೆ.