Webdunia - Bharat's app for daily news and videos

Install App

ಸದನದಲ್ಲಿ ಕೋಲಾಹಲ ಸೃಷ್ಟಿಸಿದ ಬಿಜೆಪಿ: ಕಲಾಪ ನಾಳೆಗೆ ಮುಂದೂಡಿಕೆ

Webdunia
ಗುರುವಾರ, 7 ಫೆಬ್ರವರಿ 2019 (14:39 IST)
ಮೊದಲ ದಿನದ ನಂತರ ಮತ್ತೆ ಎರಡನೇ ದಿನವೂ ಸದನದಲ್ಲಿ ಬಿಜೆಪಿ ಕೋಲಾಹಲ ಸೃಷ್ಟಿಸಿದೆ.

ಗದ್ದಲ, ಕೋಲಾಹಲಕ್ಕೆ ಸದನದ ಎರಡನೇ ದಿನದ ಕಲಾಪ ಬಲಿಯಾಗಿದೆ. ಮೊದಲ ದಿನವೇ ಸಿಎಂ ಸ್ಥಾನದಿಂದ ಕುಮಾರಸ್ವಾಮಿ ಕೆಳಗೆ ಇಳಿಯಬೇಕು ಎಂದಿದ್ದ ಬಿಜೆಪಿ ನಾಯಕರು, ಎರಡನೇ ದಿನವೂ ಧರಣಿ ಮುಂದುವರಿಸಿದರು.  ಸುಗಮ ಕಲಾಪಕ್ಕೆ ಅವಕಾಶ ನಿರ್ಮಾಣವಾಗದ ಕಾರಣ ನಾಳೆಗೆ ಸದನ ಮುಂದೂಡಲಾಯಿತು.

ಇಂದು ಸದನದ ಕೋರಂ ಬೆಲ್ ಭಾರಿಸುತ್ತಿದ್ದಂತೆಯೇ ಬಿಜೆಪಿಯ ಸದಸ್ಯರು, ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಯಲ್ಲಿ ನಿಂತು ಧರಣಿ ಮುಂದುವರೆಸಿದರು. ಸಭಾಧ್ಯಕ್ಷ ರಮೇಶ್ಕುಮಾರ್ ಸದನದ ಒಳಗೆ ಬರುತ್ತಿದ್ದಂತೆ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಏರು ದ್ವನಿಯಲ್ಲಿ ಧಿಕ್ಕಾರ ಕೂಗಿದರು.

ಬಿಜೆಪಿ ಸದಸ್ಯರ ಧರಣಿ ಧಿಕ್ಕಾರದ ಘೋಷಣೆಗಳ ನಡುವೆಯೇ ಸಭಾಧ್ಯಕ್ಷ ರಮೇಶ್ಕುಮಾರ್ ಕಲಾಪ ಪಟ್ಟಿಯಂತೆ ಸಭೆಯ ಮುಂದಿಡಲಾಗುವ ಕಾಗದ ಪತ್ರಗಳನ್ನು ಮಂಡಿಸುವಂತೆ ಸೂಚನೆ ನೀಡಿದರು. ಅದರಂತೆ ಗದ್ದಲದ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಹಲವು ಸಚಿವರುಗಳು ತಮ್ಮ ಹೆಸರಿನ ಮುಂದಿರುವ ಕಾಗದ ಪತ್ರಗಳನ್ನು ಸದನದಲ್ಲಿ ಮಂಡಿಸಿದರು.

ಕಾಗದ ಪತ್ರಗಳ ಮಂಡನೆ ನಡೆಯುತ್ತಿದ್ದರೂ ಬಿಜೆಪಿ ಸದಸ್ಯರ ಗದ್ದಲ ನಿಲ್ಲಲಿಲ್ಲ. ಘೋಷಣೆಗಳು ತಾರಕಕ್ಕೇರಿ ಗೋಬ್ಯಾಕ್ ಸಿಎಂ, ಸ್ಟೇಪ್ ಡೌನ್, ಸ್ಟೇಪ್ ಡೌನ್ ಸಿಎಂ, ಸರ್ಕಾರಕ್ಕೆ ಧಿಕ್ಕಾರ, ಸರ್ಕಾರಕ್ಕೆ ಬಹುಮತ ಇಲ್ಲ ಎಂಬ ಘೋಷಣೆಗಳು ಮುಂದುವರಿದೇ ಇದ್ದವು.   ಪದೇ ಪದೇ ಮುಂದೂಡಿಕೆ ಬಳಿಕವೂ ಸದನ ಶಾಂತರೀತಿಗೆ ಬರಲಿಲ್ಲ. ವಿರೋಧ ಪಕ್ಷವಾದ ಬಿಜೆಪಿ ಹಾಗೂ ಆಡಳಿತ ಪಕ್ಷಗಳ ಸದಸ್ಯರ ಘೋಷಣೆ-ಪ್ರತಿ ಘೋಷಣೆಯಿಂದ ಸದನದಲ್ಲಿ ಗದ್ದಲ ತಾರಕಕ್ಕೇರಿ ಕೋಲಾಹಲದ ಪರಿಸ್ಥಿತಿ ನಿರ್ಮಾಣವಾದಾಗ ಸಭಾಧ್ಯಕ್ಷರು ಸದನವನ್ನು ನಾಳೆಗೆ ಮುಂದೂಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕಿಸ್ತಾನಕ್ಕೆ ಬೇಹುಗಾರಿಕೆ: ನಮ್ಮವರೇ ಹೀಗೇ ಮಾಡಿದ್ರೆ ಏನ್‌ ಮಾಡೋದು

ಪಾಕ್‌ನಲ್ಲಿ ತೀವ್ರವಾದ ಆಹಾರ ಅಭದ್ರತೆ: 11ಮಿಲಿಯನ್ ಜನರ ಮೇಲೆ ಪರಿಣಾಮ ಸಾಧ್ಯತೆ

ದೇವೇಗೌಡರಿಗೆ 92ನೇ ಜನ್ಮದಿನದ ಸಂಭ್ರಮ: ಮೋದಿ, ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

ಧರ್ಮಸ್ಥಳದ ಏರೋಸ್ಪೇಸ್ ಉದ್ಯೋಗಿ ಪಂಜಾಬ್‌ನಲ್ಲಿ ನಿಗೂಢ ಸಾವು: ಕೊಲೆ ಶಂಕೆ, ಸಮಗ್ರ ತನಿಖೆಗೆ ತಾಯಿ ಒತ್ತಾಯ

ಮುಂದಿನ ಸುದ್ದಿ
Show comments