Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸದನದಲ್ಲಿ ಕೋಲಾಹಲ ಸೃಷ್ಟಿಸಿದ ಬಿಜೆಪಿ: ಕಲಾಪ ನಾಳೆಗೆ ಮುಂದೂಡಿಕೆ

ಸದನದಲ್ಲಿ ಕೋಲಾಹಲ ಸೃಷ್ಟಿಸಿದ ಬಿಜೆಪಿ: ಕಲಾಪ ನಾಳೆಗೆ ಮುಂದೂಡಿಕೆ
ಬೆಂಗಳೂರು , ಗುರುವಾರ, 7 ಫೆಬ್ರವರಿ 2019 (14:39 IST)
ಮೊದಲ ದಿನದ ನಂತರ ಮತ್ತೆ ಎರಡನೇ ದಿನವೂ ಸದನದಲ್ಲಿ ಬಿಜೆಪಿ ಕೋಲಾಹಲ ಸೃಷ್ಟಿಸಿದೆ.

ಗದ್ದಲ, ಕೋಲಾಹಲಕ್ಕೆ ಸದನದ ಎರಡನೇ ದಿನದ ಕಲಾಪ ಬಲಿಯಾಗಿದೆ. ಮೊದಲ ದಿನವೇ ಸಿಎಂ ಸ್ಥಾನದಿಂದ ಕುಮಾರಸ್ವಾಮಿ ಕೆಳಗೆ ಇಳಿಯಬೇಕು ಎಂದಿದ್ದ ಬಿಜೆಪಿ ನಾಯಕರು, ಎರಡನೇ ದಿನವೂ ಧರಣಿ ಮುಂದುವರಿಸಿದರು.  ಸುಗಮ ಕಲಾಪಕ್ಕೆ ಅವಕಾಶ ನಿರ್ಮಾಣವಾಗದ ಕಾರಣ ನಾಳೆಗೆ ಸದನ ಮುಂದೂಡಲಾಯಿತು.

ಇಂದು ಸದನದ ಕೋರಂ ಬೆಲ್ ಭಾರಿಸುತ್ತಿದ್ದಂತೆಯೇ ಬಿಜೆಪಿಯ ಸದಸ್ಯರು, ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಯಲ್ಲಿ ನಿಂತು ಧರಣಿ ಮುಂದುವರೆಸಿದರು. ಸಭಾಧ್ಯಕ್ಷ ರಮೇಶ್ಕುಮಾರ್ ಸದನದ ಒಳಗೆ ಬರುತ್ತಿದ್ದಂತೆ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಏರು ದ್ವನಿಯಲ್ಲಿ ಧಿಕ್ಕಾರ ಕೂಗಿದರು.

ಬಿಜೆಪಿ ಸದಸ್ಯರ ಧರಣಿ ಧಿಕ್ಕಾರದ ಘೋಷಣೆಗಳ ನಡುವೆಯೇ ಸಭಾಧ್ಯಕ್ಷ ರಮೇಶ್ಕುಮಾರ್ ಕಲಾಪ ಪಟ್ಟಿಯಂತೆ ಸಭೆಯ ಮುಂದಿಡಲಾಗುವ ಕಾಗದ ಪತ್ರಗಳನ್ನು ಮಂಡಿಸುವಂತೆ ಸೂಚನೆ ನೀಡಿದರು. ಅದರಂತೆ ಗದ್ದಲದ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಹಲವು ಸಚಿವರುಗಳು ತಮ್ಮ ಹೆಸರಿನ ಮುಂದಿರುವ ಕಾಗದ ಪತ್ರಗಳನ್ನು ಸದನದಲ್ಲಿ ಮಂಡಿಸಿದರು.

ಕಾಗದ ಪತ್ರಗಳ ಮಂಡನೆ ನಡೆಯುತ್ತಿದ್ದರೂ ಬಿಜೆಪಿ ಸದಸ್ಯರ ಗದ್ದಲ ನಿಲ್ಲಲಿಲ್ಲ. ಘೋಷಣೆಗಳು ತಾರಕಕ್ಕೇರಿ ಗೋಬ್ಯಾಕ್ ಸಿಎಂ, ಸ್ಟೇಪ್ ಡೌನ್, ಸ್ಟೇಪ್ ಡೌನ್ ಸಿಎಂ, ಸರ್ಕಾರಕ್ಕೆ ಧಿಕ್ಕಾರ, ಸರ್ಕಾರಕ್ಕೆ ಬಹುಮತ ಇಲ್ಲ ಎಂಬ ಘೋಷಣೆಗಳು ಮುಂದುವರಿದೇ ಇದ್ದವು.   ಪದೇ ಪದೇ ಮುಂದೂಡಿಕೆ ಬಳಿಕವೂ ಸದನ ಶಾಂತರೀತಿಗೆ ಬರಲಿಲ್ಲ. ವಿರೋಧ ಪಕ್ಷವಾದ ಬಿಜೆಪಿ ಹಾಗೂ ಆಡಳಿತ ಪಕ್ಷಗಳ ಸದಸ್ಯರ ಘೋಷಣೆ-ಪ್ರತಿ ಘೋಷಣೆಯಿಂದ ಸದನದಲ್ಲಿ ಗದ್ದಲ ತಾರಕಕ್ಕೇರಿ ಕೋಲಾಹಲದ ಪರಿಸ್ಥಿತಿ ನಿರ್ಮಾಣವಾದಾಗ ಸಭಾಧ್ಯಕ್ಷರು ಸದನವನ್ನು ನಾಳೆಗೆ ಮುಂದೂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯ ಎದುರಲ್ಲೆ 19ರ ಯುವತಿಯ ಮೇಲೆ ಗ್ಯಾಂಗ್‌ರೇಪ್