Publish Date: Fri, 05 May 2023 (17:10 IST)
Updated Date: Fri, 05 May 2023 (17:40 IST)
ಬಜರಂಗದಳದ ಚರ್ಚೆ ನನಗೆ ಮುಖ್ಯವಲ್ಲ. ನಾಡಿನ ಜನತೆಯ ಸಮಸ್ಯೆ, ರೈತರ ಬದುಕು ನನಗೆ ಮುಖ್ಯ ಎಂದು ಮಾಜಿ ಸಿಎಂ H.D. ಕುಮಾರಸ್ವಾಮಿ ಹೇಳಿದ್ದಾರೆ.. ಹಾವೇರಿಯಲ್ಲಿ ಮಾತನಾಡಿದ ಅವರು, ಯಾವುದೋ ಸಂಘಟನೆಗಳನ್ನ ಬ್ಯಾನ್ ಮಾಡೋದು ಈಗ ನನ್ನ ಮುಂದಿಲ್ಲ.. ಸಂಘಟನೆಗಳು ಒಳ್ಳೆ ರೀತಿಯಲ್ಲಿ ನಡೆದುಕೊಂಡು ಹೋಗುವಂತೆ ಮಾಡೋದು ರಾಜಕೀಯ ಪಕ್ಷಗಳ ಕರ್ತವ್ಯ. ಬ್ಯಾನ್ ಮಾಡುವ ಅವಶ್ಯಕತೆ ಏನಿದೆ, ಮೊದಲು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋದ್ರೆ ಬ್ಯಾನ್ ಮಾಡುವ ಪ್ರಶ್ನೆ ಬರಲ್ಲ ಎಂದು ತಿಳಿಸಿದ್ರು.