Publish Date: Thu, 04 May 2023 (17:00 IST)
Updated Date: Thu, 04 May 2023 (16:48 IST)
ಭಜರಂಗಿ ಆಂಜನೇಯನಿಗೂ ಬಜರಂಗದಳಕ್ಕೂ ಸಂಬಂಧವೇ ಇಲ್ಲ. ಅದೊಂದು ಸಂಸ್ಥೆ ಮಾತ್ರ. ಹೆಸರಿಟ್ಟುಕೊಂಡ ಮಾತ್ರಕ್ಕೆ ಯಾರೂ ರಾಮ, ಕೃಷ್ಣ, ಆಂಜನೇಯ ಆಗಲ್ಲ ಅಂತಾ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನ ಹೆಸರಿನಲ್ಲೂ ರಾಮ ಅಂತಿದೆ. ನನಗೆ ಯಾರಾದರೂ ಏನಾದರೂ ಅಂದರೆ ಅದು ರಾಮನಿಗೆ ಅವಮಾನ ಮಾಡಿದಂತೆ ಆಗುತ್ತದಾ? ನಾನು ಗೃಹ ಸಚಿವನಾಗಿದ್ದವನು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರ ಹಾಗೂ PFI ಎರಡೂ ಸಂಘಟನೆಗಳು ಸಹ ಹಲವಾರು ಹತ್ಯೆಗಳನ್ನು ಮಾಡಿಸಿದೆ. ನಾನು ನನ್ನ ನಗ್ನ ಸತ್ಯ ಎಂಬ ಪುಸ್ತಕದಲ್ಲಿ ಅದನ್ನು ಆಧಾರ ಸಹಿತ ವಿವರಿಸಿದ್ದೇನೆ.. ಬೇಕಾದರೆ ಆ ಪುಸ್ತಕ ತೆಗೆದುಕೊಂಡು ಓದಲಿ ಎಂದು ತಿಳಿಸಿದ್ರು.. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತ. ಬಿಜೆಪಿಯಲ್ಲಿ ಮಾಜಿ ಸಿಎಂ B.S. ಯಡಿಯೂರಪ್ಪ ಪದಚ್ಯುತಿ ಬಳಿಕ ನಾಯಕರೇ ಇಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರಕ್ಕೆ ಜನರನ್ನು ದುಡ್ಡು ಕೊಟ್ಟು ಕರೆದುಕೊಂಡು ಬರುತ್ತಿದ್ದಾರೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಸಿಎಂ ಹುದ್ದೆ ಅಕಾಂಕ್ಷಿಯಲ್ಲ. ಅದರೆ ಮಂತ್ರಿ ಆಗುತ್ತೇನೆ ಎಂದು ಹೇಳಿದ್ರು.