Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮದುವೆ ಸಮಾರಂಭಗಳ ಸೀಸನ್ ಶುರುವಾಗಿದ್ದು, ಚಿನ್ನ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.ಬೆಂಗಳೂರು: ಮೂರ್ನಾಲ್ಕು ದಿನಗಳಿಂದ ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ (Gold Rate) ನಿನ್ನೆ ಮತ್ತೆ ಏರಿಕೆಯಾಗಿತ್ತು. ಇಂದು 10 ಗ್ರಾಂ ಚಿನ್ನಕ್ಕೆ ಕೇವಲ 10 ರೂ. ಹೆಚ್ಚಳವಾಗಿದೆ. ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 10 ರೂ. ಏರಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತವಾಗಿಲ್ಲ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ (Silver Price) ಇಂದು ಯಥಾಸ್ಥಿತಿಯಲ್ಲಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದ ಅನೇಕ ನಗರಗಳಲ್ಲಿ ಎರಡು ದಿನಗಳಿಂದ ಚಿನ್ನದ ಬೆಲೆ ಕುಸಿತವಾಗಿತ್ತು. ಆದರೆ, ಇಂದು ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,450 ರೂ. ಇದ್ದುದು ಯಥಾಸ್ಥಿತಿಯಲ್ಲಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,760 ರೂ. ಇದ್ದುದು 51,770 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,220 ರೂ. ಮುಂಬೈ- 47,450 ರೂ, ದೆಹಲಿ- 47,450 ರೂ, ಕೊಲ್ಕತ್ತಾ- 47,450 ರೂ, ಬೆಂಗಳೂರು- 47,450 ರೂ, ಹೈದರಾಬಾದ್- 47,450 ರೂ, ಕೇರಳ- 47,450 ರೂ, ಪುಣೆ- 47,480 ರೂ, ಮಂಗಳೂರು- 47,450 ರೂ, ಮೈಸೂರು- 47,450 ರೂ. ಇದೆ.
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,600 ರೂ, ಮುಂಬೈ- 51,770 ರೂ, ದೆಹಲಿ- 51,770 ರೂ, ಕೊಲ್ಕತ್ತಾ- 51,770 ರೂ, ಬೆಂಗಳೂರು- 51,770 ರೂ, ಹೈದರಾಬಾದ್- 51,770 ರೂ, ಕೇರಳ- 51,770 ರೂ, ಪುಣೆ- 51,790 ರೂ, ಮಂಗಳೂರು- 51,770 ರೂ, ಮೈಸೂರು- 51,770 ರೂ. ಇದೆ.
ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರೆ ಬೆಳ್ಳಿ ಬೆಲೆ (Silver Price) ಇಳಿಮುಖವಾಗಿದೆ.
ಇಂದಿನ ಬೆಳ್ಳಿಯ ದರ:
ಕಳೆದ ವಾರದಿಂದ ಗಗನಕ್ಕೇರಿದ್ದ ಬೆಳ್ಳಿ ಬೆಲೆ ಇಂದು ಯಥಾಸ್ಥಿತಿಯ ಕಾಯ್ದುಕೊಂಡಿದೆ. ಇಂದು ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 69,000 ರೂ. ಇದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,900 ರೂ, ಮೈಸೂರು- 72,900 ರೂ., ಮಂಗಳೂರು- 72,900 ರೂ., ಮುಂಬೈ- 69,000 ರೂ, ಚೆನ್ನೈ- 72,900 ರೂ, ದೆಹಲಿ- 69,000 ರೂ, ಹೈದರಾಬಾದ್- 72,900 ರೂ, ಕೊಲ್ಕತ್ತಾ- 69,000 ರೂ. ಇದೆ. ವಿವಿಧ ನಗರಗಳಲ್ಲಿ ಕೂಡ ಇಂದು ಬೆಳ್ಳಿ ದರ ವ್ಯತ್ಯಾಸವಾಗಿಲ್ಲ.