2021-22ನೇ ಸಾಲಿಗೆ ನಡೆಯಲಿರೋ SSLC ಪರೀಕ್ಷೆಗೆ ಪಠ್ಯ ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ.. ಶಾಲೆ ತಡವಾಗಿ ಆರಂಭವಾಗಿದ್ದು, ಈವರೆಗೂ ಅಂದುಕೊಂಡಂತೆ ಸಿಲಬಸ್ ಪೂರ್ಣಗೊಂಡಿಲ್ಲ.. ಹೀಗಾಗಿ ಮಾರ್ಚ್ ನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯಲಿದ್ದು, ಎಷ್ಟು ಸಿಲಬಸ್ ಕಂಪ್ಲೀಟ್ ಆಗುತ್ತೆ ಅನ್ನೋ ಬಗ್ಗೆ ಡಯಟ್ ಅಧಿಕಾರಿಗಳು, ಬಿಇಓಗಳು ಹಾಗೂ ಶಿಕ್ಷಕರ ಜೊತೆ ಸಚಿವ ಬಿ.ಸಿ ನಾಗೇಶ್ ಸಭೆ ನಡೆಸಿದ್ದಾರೆ.. ಅಂತಿಮವಾಗಿ ಶೇ 80ರಷ್ಟು ಪಠ್ಯವನ್ನ ಭೋದನೆ ಮಾಡುವಂತೆ ತೀರ್ಮಾನ ಕೈಗೊಂಡಿದ್ದು, ಉಳಿದ ಶೇ.20ರಷ್ಟು ಪಠ್ಯವನ್ನ ಕೈ ಬಿಡಲು ನಿರ್ಧಾರ ಮಾಡಲಾಗಿದೆ.. ಈ ಬಾರಿ SSLC ಪರೀಕ್ಷೆ ಬರೆಯುವವರು, ಕೋವಿಡ್ ಹಿನ್ನೆಲೆ 8 ಮತ್ತು 9ರ ಪರೀಕ್ಷೆ ಬರೆದಿಲ್ಲ.. ಹೀಗಾಗಿ ಈಗ ಪರೀಕ್ಷೆ ಅನಿವಾರ್ಯವಾಗಿದ್ದು, 80ರಷ್ಟು ಸಿಲಬಸ್ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.. ಗಣಿತ ಮತ್ತು ವಿಜ್ಞಾನ ವಿಷಯ ಕಡಿತ ಮಾಡದಂತೆ ನನ್ನ ಅಭಿಪ್ರಾಯ ಇತ್ತು.. ಆದ್ರೆ ಮಕ್ಕಳು ಹಿಂದಿನ ಎರಡು ವರ್ಷದ ಪಠ್ಯಗಳ ಅಧ್ಯಯನ ಆಗಿಲ್ಲ.. ಹಾಗಾಗಿ ಪಿಯುಗೆ ಹೋಗುವ ಮೊದಲು, ಇದರ ಅಧ್ಯಯನ ಮಾಡಬೇಕಿದೆ ಅಂತ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ರು..