ಕೋಗಿಲೆ ತೋಟದ ಬಾವಿಯೊಂದರಲ್ಲಿ ಬರೋಬ್ಬರಿ 200 ಕೆಜಿ ತೂಕದ ಮೊಸಳೆಯನ್ನು ಸೆರೆಹಿಡಿಯಲಾಗಿದೆ.
200 ಕೆಜಿ ತೂಕ ಮತ್ತು 10 ಅಡಿ ಉದ್ದದ ಮೊಸಳೆಯನ್ನು ರಕ್ಷಣೆ ಮಾಡಿದ್ದಾರೆ ಅರಣ್ಯ ಸಿಬ್ಬಂದಿ ಮತ್ತು ಗ್ರಾಮಸ್ಥರು.
ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮದ ಬಳಿ ಕೋಗಿಲೆ ತೋಟದ ಬಾವಿಯಲ್ಲಿ ಈ ಭಯಾನಕ ಮೊಸಳೆಯನ್ನ ಸೆರೆ ಹಿಡಿಯಲಾಗಿದೆ.
ಸುಮಾರು 3 ಗಂಟೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಯು ಬಾವಿಯಿಂದ ಮೊಸಳೆಯನ್ನು ಮೇಲಕ್ಕೆ ಎತ್ತಿದ್ದಾರೆ.
ವೇದಗಂಗಾ ನದಿಯ ಪ್ರವಾಹದಿಂದ ತೋಟದ ಬಾವಿಯಲ್ಲಿ ಭಾರೀ ಗಾತ್ರದ ಮೊಸಳೆ ಇಳಿದಿತ್ತು.