Publish Date: Fri, 25 Aug 2023 (15:47 IST)
Updated Date: Fri, 25 Aug 2023 (13:51 IST)
ಟೆಂಪೋ ಗಾಡಿಯ ಬ್ರೇಕ್ ಫೈಲೂರ್ ಆದ ಹಿನ್ನೆಲೆ ಯಶವಂತಪುರ ಮತ್ತಿಕೆರೆ ರಸ್ತೆಯಲ್ಲಿ ಭೀಕರ ಅಪಘಾತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಾಹನದ ವೇಗದ ರಭಸಕ್ಕೆ ಮರಕ್ಕೆ ಟೆಂಪೋ ಗುದ್ದಿದ್ದು, ಸ್ಥಳಕ್ಕೆ ಯಶವಂತಪುರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮರಕ್ಕೆ ವಾಹನ ಗುದ್ದಿ ರಸ್ತೆಗೆ ಅಡ್ಡಗಟ್ಟಿದ್ದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.