ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಸಂಬಂಧ ಹೈಕೋರ್ಟ ಸರ್ಕಾರ ಮತ್ತು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ. 2019 ಜೂ.18 ರಂದು ಹೈಕೋರ್ಟ, ರಾಜಕಾಲುವೆ ಒತ್ತುವರಿ ಸರ್ವೆ ನಡೆಸಿ ತೆರವು ಮಾಡುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಸರ್ಕಾರ ಮತ್ತು ಬಿಬಿಎಂಪಿ ಪಾಲಿಸದ ಹಿನ್ನೆಲೆ ಹೈಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ. “2019ರ ಜೂ.18ರಂದೇ ರಾಜಕಾಲುವೆ ಒತ್ತುವರಿ ಸರ್ವೆ ನಡೆಸಿ ತೆರವಿಗೆ ಆದೇಶಿಸಿದ್ದೆವು. ಕೆರೆಗಳ ಒತ್ತುವರಿ ತಡೆಗೆ ಸಿಸಿಕ್ಯಾಮರಾ ಅಳವಡಿಕೆಗೂ ಸೂಚಿಸಿದ್ದೆವು. ಹೈಕೋರ್ಟ್ ಆದೇಶ ಪಾಲಿಸಿದ್ದರೆ ಈಗ ಪ್ರವಾಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ”, ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಿ ಎಂದು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.