Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಬ್ಲಿಘಿ ಜಮಾತ್ – ಕೆ.ಎಸ್.ಈಶ್ವರಪ್ಪ ಹೀಗಾ ಹೇಳೋದು

ತಬ್ಲಿಘಿ ಜಮಾತ್ – ಕೆ.ಎಸ್.ಈಶ್ವರಪ್ಪ ಹೀಗಾ ಹೇಳೋದು
ದಾವಣಗೆರೆ , ಶುಕ್ರವಾರ, 3 ಏಪ್ರಿಲ್ 2020 (15:39 IST)
ದೆಹಲಿಗೆ ಹೋಗಿ ಬಂದ ಎಲ್ಲರನ್ನೂ ಹೋಂ ಕ್ವಾರಂಟೈನ್ ಇಟ್ಟು ಕೊರೋನಾ ವೈರಾಣು ಇತರರಿಗೆ ಹರಡದಂತೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಹೀಗಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆ ಮಾಯಕೊಂಡದಲ್ಲಿ ನಡೆದ ಕೋವಿಡ್ 19 ಮುಂಜಾಗ್ರತಾ  ಕ್ರಮಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ದಾವಣಗೆರೆ ಸೇರಿದಂತೆ ರಾಜ್ಯದ ಬಹುತೇಕ  ಜಿಲ್ಲೆಗಳಿಂದ ಜನರು ತಬ್ಲಿಘಿ ಸಮಾವೇಶ ಸೇರಿದಂತೆ ವಿವಿಧ ಕಾರಣಗಳಿಗಾಗಿ ದೆಹಲಿಗೆ ಹೋಗಿ ಬಂದಿದ್ದಾರೆ. ಅಂಥವರನ್ನು ಪತ್ತೆ ಹಚ್ಚಲಾಗಿದೆ ಎಂದಿದ್ದಾರೆ. 

ಆಶಾ ಕಾರ್ಯಕರ್ತೆಯರ ಸೇವೆಗೆ ಅಡ್ಡಿ ಪಡಿಸುವರನ್ನು ತಕ್ಷಣವೇ ಬಂಧಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಇಂಥ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅನುಪಮವಾದುದು. ಅವರ ಸೇವೆಗೆ ಅಡ್ಡಿ ಪಡಿಸುವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವೈರಸ್ 99 ಶಂಕಿತರ ಮಾದರಿ ಪರೀಕ್ಷೆಗೆ