Publish Date: Fri, 03 Apr 2020 (14:58 IST)
Updated Date: Fri, 03 Apr 2020 (14:59 IST)
ಕೋವಿಡ್ -19 ಶಂಕೆಯಿಂದಾಗಿ ಈ ಜಿಲ್ಲೆಯಿಂದ ಇದುವರೆಗೂ 99 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯಿಂದ ಇದುವರೆಗೆ ಕಳುಹಿಸಲಾಗಿದ್ದ ಕೊವಿಡ್-19 ಶಂಕಿತರ ಗಂಟಲು ದ್ರವದ ವರದಿಗಳಲ್ಲಿ ಒಟ್ಟು 82 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ ಒಬ್ಬರ ವರದಿ ಬರುವುದು ಮಾತ್ರ ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕ ಕುಮಾರ್ ತಿಳಿಸಿದ್ದಾರೆ.
ಇದುವರೆಗೆ ಜಿಲ್ಲೆಯಿಂದ 99 ಜನ ಶಂಕಿತರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವುಗಳಲ್ಲಿ 82 ನೆಗೆಟಿವ್, 8 ಪಾಸಿಟಿವ್, ಒಂದು ಗೈಡ್‌ಲೈನ್ಸ್ ಪ್ರಕಾರ ಇರದಿದ್ದರಿಂದ ತಿರಸ್ಕೃತ ಹಾಗೂ ಏಳು ಮಾದರಿಗಳು ಕೊವಿಡ್-19ಗೆ ಸಂಬಂಧಿಸಿದಂತೆ ಕಂಡು ಬರದ ಕಾರಣ ಅಪ್ರೂವಲ್ ಆಗಿರಲಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.