Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ ಮನೆ ಮೇಲೆ ಐಟಿ ದಾಳಿ

ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ ಮನೆ ಮೇಲೆ ಐಟಿ ದಾಳಿ
ಹಾವೇರಿ , ಬುಧವಾರ, 4 ಡಿಸೆಂಬರ್ 2019 (10:21 IST)
ಹಾವೇರಿ : ಉಪಚುನಾವಣೆಗೆ ಮುನ್ನವೇ ರಾಣಿಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ ಅವರ  ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.



ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ ಅವರ ವಾಗೀಶ್ ನಗರ 6ನೇ ಕ್ರಾಸ್ ಬಳಿ ಇರುವ ಮನೆಯಲ್ಲಿ 10 ಕೋಟಿ ಅಕ್ರಮ ಹಣ, ಮದ್ಯ ಇಟ್ಟಿರುವುದಾಗಿ ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನಲೆಯಲ್ಲಿ  20ಕ್ಕೂ ಹೆಚ್ಚು ಅಬಕಾರಿ ಹಾಗೂ ಐಟಿ ಅಧಿಕಾರಿ ರಾತ್ರಿ 10 ಗಂಟೆ ಸುಮಾರಿಗೆ ದಿಢೀರ್ ದಾಳಿ ನಡೆಸಿದ್ದಾರೆ.


ಆದರೆ ದಾಳಿಯ ವೇಳೆ ಯಾವುದೇ ಹಣ, ಮದ್ಯ ಸಿಗದೆ ಅಧಿಕಾರಿಗಳು ವಾಪಾಸಾಗಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಯ ಮನೆ ಮೇಲೆ ಈ ವೇಳೆ ದಾಳಿ ನಡೆಸಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಬಿಜೆಪಿಯ ಪ್ರಯೋಜಿತ ದಾಳಿ ಎಂದು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿಯ 12 ಸ್ಥಾಯಿ ಸಮಿತಿಯ ಚುನಾವಣೆ ಮುಂದೂಡಿಕೆ