Publish Date: Sun, 13 Oct 2019 (15:51 IST)
Updated Date: Sun, 13 Oct 2019 (15:53 IST)
ಐಟಿ ದಾಳಿ ಕೇವಲ ಕಾಂಗ್ರೆಸ್ ಮುಖಂಡರ ಮೇಲಷ್ಟೇ ಆಗದೇ ಬಿಜೆಪಿಯವರ ಮೇಲೂ ಆಗಿದೆ. ಆ ಬಗ್ಗೆ ಕಾಂಗ್ರೆಸ್ ನವರು ನೋಡಿಕೊಂಡು ಮಾತನಾಡಲಿ. ಹೀಗಂತ ಕೇಂದ್ರ ಸಚಿವ ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದು, ಐಟಿ ದಾಳಿ ಮತ್ತು ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಹೀಗಂತ ಜಿ.ಪರಮೇಶ್ವರ ಅವರೇ ಸ್ಪಷ್ಟ ಪಡಿಸಿದ್ದಾರೆ. ಹಾಗಾಗಿ ಇದರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ.
ಬಹಳ ದೊಡ್ಡ ಪ್ರಮಾಣದಲ್ಲಿ ಐಟಿ ಮಾಹಿತಿಗಳನ್ನು ಕಲೆ ಹಾಕಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸೇರಿದಂತೆ ಅನ್ಯ ರಾಜ್ಯ ಗಳಲ್ಲಿನ ನೀಟ್ ಸೇಲ್ ಗಳು, ಕಾಲೇಜಿನ ಕೆಲವು ಆಡಳಿತ ಮಂಡಳಿಗಳು ಸೇರಿ ಮ್ಯಾನೇಜ್ಮೆಂಟ್ ಸೀಟ್ ಗಳಾಗಿ ಪರಿವರ್ತನೆ ಮಾಡಿ, ಕೋಟ್ಯಾಂತರ ರೂಪಾಯಿ ಹಣ ಗಳಿಸುವ ಕೆಲಸ ಮಾಡಲಾಗುತ್ತಿತ್ತು. ಇದು ಮಾಧ್ಯಮಗಳಲ್ಲೂ ಬಂದಿದೆ ಎಂದರು.
ಐಟಿ ದಾಳಿ ಕೇವಲ ಕಾಂಗ್ರೆಸ್ ನವರ ಮೇಲೆ ಅಷ್ಟೇ ಆಗಿಲ್ಲ. ಬಿಜೆಪಿಯ 10 ಜನರ ಮೇಲೂ ಆಗಿದೆ. ಅವರ ಹೆಸರು ಕೂಡಾ ಹೇಳಬಲ್ಲೆ. ಆದರೆ ಈಗ ಅದನ್ನು ಹೇಳುವುದು ಸರಿಯಲ್ಲ. ಕಾಂಗ್ರೆಸ್ ಆರೋಪಿಸುವ ಹೇಳಿಕೆಯನ್ನು ನಂಬುವದಕ್ಕಿಂತ ಮೋದಿ ಸರ್ಕಾರ ಬಂದ ನಂತರ ಕರ್ನಾಟಕದಲ್ಲಿ ಎಷ್ಟು ಬಾರಿ ಐಟಿ ದಾಳಿ ಆಗಿದೆ ಎಂಬುದನ್ನು ತಿಳಿದು ಕಾಂಗ್ರೆಸ್ ನವರು ಮಾತನಾಡಲಿ ಎಂದಿದ್ದಾರೆ.