Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಲ್ಲು ನಾಗರಕ್ಕೆ ಹಾಲು ಹಾಕಬೇಡಿ ಎಂದ ಸ್ವಾಮೀಜಿ

ಕಲ್ಲು ನಾಗರಕ್ಕೆ ಹಾಲು ಹಾಕಬೇಡಿ ಎಂದ ಸ್ವಾಮೀಜಿ
ದಾವಣಗೆರೆ , ಗುರುವಾರ, 1 ಆಗಸ್ಟ್ 2019 (17:40 IST)
ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿಯಲ್ಲಿ ಕಲ್ಲಿನ ನಾಗರಹಾವಿಗೆ ಹಾಲು ಎರೆಯಬಾರದು. ಹೀಗಂತ ಕೂಡಲಸಂಗಮ ಸ್ವಾಮೀಜಿ ಹೇಳಿದ್ದಾರೆ.

ಕಲ್ಲು ನಾಗರಕ್ಕೆ ಹಾಲು ಎರೆಯುವ ಬದಲು ಮಕ್ಕಳಿಗೆ ಹಾಲು ನೀಡಬೇಕು. ಹೀಗಂತ ದಾವಣಗೆರೆಯಲ್ಲಿ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಶ್ರೀ ಗಳು ಮನವಿ ಮಾಡಿಕೊಂಡಿದ್ದಾರೆ. ದಾವಣಗೆರೆಯ ಕೊಂಡಜ್ಜಿ ರಸ್ತೆಯಲ್ಲಿರುವ  ಬಿಜಿಎಂ ಶಾಲೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ನಡೆದ 22 ನೇ ವರ್ಷದ ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು.

ದೇಶಾದ್ಯಂತ ನಾಗರ ಪಂಚಮಿ ಆಚರಣೆ ಮಾಡಲಾಗುತ್ತದೆ. ಆಗ ಲಕ್ಷಾಂತರ ‌ಲೀಟರ್ ನಷ್ಟು ಹಾಲನ್ನು ನಾಗರ ಮೂರ್ತಿಗಳಿಗೆ, ಹುತ್ತಗಳಿಗೆ ಎರೆದು ವೇಸ್ಟ್ ಮಾಡುತ್ತಿದ್ದಾರೆ. ಅದನ್ನು ಮಕ್ಕಳಿಗೆ ನೀಡಿದ್ರೆ ಸದೃಢವಾದಂತಹ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಹಾಲು ‌ಹುತ್ತಕ್ಕೆ ಎರೆಯುವುದರಿಂದ ಹಾವುಗಳು ಸಾವನ್ನಪ್ಪುವ ಘಟನೆಗಳು ನಡೆದಿವೆ.

ಆದ್ದರಿಂದ ಕೇವಲ‌ ಪೂಜೆ ಸಲ್ಲಿಸಿ, ಹಾಲನ್ನು ಮಕ್ಕಳಿಗೆ ವಿತರಣೆ ಮಾಡುವುದರ ಮೂಲಕ ಹಬ್ಬವನ್ನು ಆಚರಣೆ ಮಾಡಿ ಅಂತ ಹೇಳಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆ ಸರಿ ಮಾಡಿಲ್ಲ ಅಂತ ಪತ್ನಿಯನ್ನೇ ಕೊಂದ ಭೂಪ