ಬೆಂಗಳೂರು : ಕೆಲವರಿಗೆ ಚಿಂತೆಯಿಂದಲೂ, ಕೆಲಸದ ಒತ್ತಡದಿಂದಲೂ ರಾತ್ರಿ ಮಲಗಿದರೆ ನಿದ್ರೆ ಬರುವುದಿಲ್ಲ. ಆಗ ಅಂತವರು ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಾರೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಬದಲು ನಿದ್ರೆಬಾರದೆ ಇರುವವರು ರಾತ್ರಿ ಮಲಗುವ ಮುಂಚೆ ಈ ಎರಡು ಕೆಲಸ ಮಾಡಿ. ಇದರಿಂದ ರಾತ್ರಿ ಕಣ್ಣು ಮುಚ್ಚಿದ ತಕ್ಷಣ ನಿದ್ರೆ ಬರುತ್ತದೆ.
ಶುದ್ಧ ಎಳ್ಳೆಣ್ಣೆ ಯನ್ನು ಸ್ವಲ್ಪ ಬಿಸಿ ಮಾಡಿ ಅದನ್ನು ಕೆಳಗಿಳಿಸಿ ಅದಕ್ಕೆ ಸ್ವಲ್ಪ ಕರ್ಪೂರ ಹಾಕಿ ಮಿಕ್ಸ್ ಮಾಡಿದಾಗ ಕರ್ಪೂರ ಕರಗುತ್ತದೆ. ಪ್ರತಿದಿನ ರಾತ್ರಿ ಪಾದವನ್ನು ಚೆನ್ನಾಗಿ ತೊಳೆದು ಒರೆಸಿಕೊಂಡು ಈ ಎಣ್ಣೆಯನ್ನು ಪಾದಕ್ಕೆ ಹಾಕಿ ಚೆನ್ನಾಗಿ 5 ನಿಮಿಷ ಮಸಾಜ್ ಮಾಡಿ ಕಾಲಿಗೆ ಸಾಕ್ಸ್ ಹಾಕಿಕೊಳ್ಳಬೇಕು. ಹೀಗೆ ಮಾಡಿದ್ರೆ ಪ್ರತಿದಿನ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ.
ಹಾಗೇ ಅದರ ಜೊತೆಗೆ 200ಎಂಎಲ್ ಹಾಲನ್ನು ಉಗುರು ಬೆಚ್ಚಗೆ ಮಾಡಿಕೊಂಡು ಅದಕ್ಕೆ 1 ಟೀ ಚಮಚ ಅಶ್ವಗಂಧ ಪೌಡರ್ ಹಾಗೂ 1 ಟೀ ಚಮಚ ಕಲ್ಲುಸಕ್ಕರೆ ಹಾಕಿ ಮಿಕ್ಸ್ ಮಾಡಿ ರಾತ್ರಿ ಊಟ ಆದ ಮೇಲೆ ಕುಡಿಯಿರಿ.