Publish Date: Fri, 13 Oct 2023 (18:20 IST)
Updated Date: Fri, 13 Oct 2023 (20:50 IST)
ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಚಿರತೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೆಡಿಯಾಲ ಮತ್ತು ಚಂಗೌಡನಹಳ್ಳಿಗೆ ಹೋಗುವ ರಸ್ತೆಯ ಪಕ್ಕದ ಜಮೀನೊಂದರಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದೆ. ಸಾವಿಗೆ ನಿಕರವಾದ ಮಾಹಿತಿ ತಿಳಿದು ಬಂದಿಲ್ಲ. ಅಲ್ಲಲ್ಲಿ ಚಿರತೆಯ ಹೆಜ್ಜೆಯ ಗುರುತು ಇರುವುದರಿಂದ ಅನುಮಾನ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಕಾಡಿನಿಂದ ನಾಡಿಗೆ ಬರುತ್ತಿದ್ದು, ಸಾರ್ವಜನಿಕರ ನಿದ್ರೆಗೆಡಿಸಿದ್ದು, ರೈತರು, ಮಹಿಳೆಯರು ಭಯಭೀತರಾಗಿ ಜಮೀನುಗಳಿಗೆ ತೆರಳಲು ಇಂದೇಟು ಹಾಕುತ್ತಿದ್ದಾರೆ.ಆದರೆ ಈ ಚಿರತೆ ಸುಮಾರು 03 ವರ್ಷದ ಹೆಣ್ಣು ಚಿರತೆಯಾಗಿದ್ದು, ಯಾರೋ ಕಿಡಿಗೇಡಿಗಳು ಸಾಯಿಸಿ ತಂದು ಬಿಸಾಡಿರಬಹುದೇನೋ..? ಅಥವಾ ವಿಷ ಸೇವಿಸಿ ಪ್ರಾಣ ಕಳೆದು ಕೊಂಡಿರಬಹುದೇ..? ಎಂಬ ಅನುಮಾನ ವ್ಯಕ್ತವಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಅರಣ್ಯಧಿಕಾರಿಗಳಾದ ನಾರಾಯಣ್, ಬಂಡೀಪುರ ವೈದ್ಯಾಧಿಕಾರಿಗಳಾದ ಡಾ. ಮಿರ್ಜಾ ವಸೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಯ ರವಾನೆ ಮಾಡಿದ್ದಾರೆ.