Publish Date: Tue, 05 Sep 2023 (15:29 IST)
Updated Date: Tue, 05 Sep 2023 (15:47 IST)
ಕೊಳೆತ ಸ್ಥಿತಿಯಲ್ಲಿ ಚಿರತೆ ಶವ ಪತ್ತೆಯಾಗಿರುವ ಘಟನೆ ಬೀದರ್ ತಾಲೂಕಿನ ಭಾವಗಿ ಗ್ರಾಮದ ಸರಹದ್ದಿನಲ್ಲಿ ನಡೆದಿದೆ. ಕಾರಂಜಾ ಹಿನ್ನೀರಿನಲ್ಲಿ ನಿನ್ನೆ ಸಾಯಂಕಾಲ ಮೀನುಗಾರರಿಗೆ ಚಿರತೆ ಶವ ಕಾಣಿಸಿಕೊಂಡಿದ್ದು, ಸುಮಾರು 5 ರಿಂದ 6 ದಿನಗಳ ಹಿಂದೆ ಚಿರತೆ ಮೃತಪಟ್ಟಿರುವ ಶಂಕೆ ಉಂಟಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಪಶು ಆಸ್ಪತ್ರೆಗೆ ಚಿರತೆ ಶವ ರವಾನಿಸಲಾಗಿದೆ. ಇನ್ನೂ, ಸ್ಥಳಕ್ಕೆ ಖುದ್ದು ಡಿಎಫ್‌ಓ ವಾನತಿ ಎಮ್.ಎಮ್. ಹಾಗು ಅರಣ್ಯಾಧಿಕಾರಿಗಳ ಮೀನುಗಾರರ ಬಳಿ ವಿಚಾರಣೆ ನಡೆಸಿದ್ದಾರೆ.