ಶಾಲಾ ಮಕ್ಕಳಿಗೆ ಪಠ್ಯಪುಸ್ತಕವನ್ನು ಪೂರೈಕೆಯನ್ನು ಮಾಡಲಾಗಿದೆ. ಮಕ್ಕಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ ಎಂದೆಲ್ಲಾ ಹೇಳುತ್ತಿದ್ದ ಸರ್ಕಾರ ಬಿಬಿಎಂಪಿ ಶಾಲೆಗಳತ್ತ ಹೋಗಿ ನೋಡಬೇಕಾಗಿದೆ . ಪರಿಷ್ಕೃತ ಪಠ್ಯಪುಸ್ತಗಳು ಸಿಗದೇ ಮಕ್ಕಳು ಪಾಠವನ್ನು ಕಲಿಯುವಂತಾಗಿದೆ. ಬಿಬಿಎಂಪಿ ಶಾಲೆಗಳಿಗೆ ಪರಿಷ್ಕೃತ ಪಠ್ಯಪುಸ್ತಕ ತಲುಪಿಲ್ಲ. ಪರಿಷ್ಕರಣೆಯಾಗಿರುವ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕ ಶಾಲೆಗಳಿಗೆ ತಲುಪಿಲ್ಲ. ಮಕ್ಕಳಿಗೆ ಆ ವಿಷಯದಲ್ಲಿ ಪಾಠಗಳು ನಡೆಯುತ್ತಿಲ್ಲ. ಶಿಕ್ಷಣ ಇಲಾಖೆ ಬೇಗ ಪಠ್ಯಪುಸ್ತಕವನ್ನು ಪೂರೈಸುವಂತೆ ಕೇಳಿದ್ದೇವೆ. ಶಿಕ್ಷಣ ಇಲಾಖೆಯೇ ಪಠ್ಯಪುಸ್ತಕವನ್ನು ಪೂರೈಸಬೇಕಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮಹೋಹರ್ ಹೇಳಿದ್ದಾರೆ.