ಕೊರೊನ ಕಾರಣದಿಂದ ಈಗಾಗಲೇ ಶಿಕ್ಷಣ ಇಲಾಖೆ ಸೈಕಲ್ ಭಾಗ್ಯಕ್ಕೆ ಬಾಯ್ ಬಾಯ್ ಅಂದಿತ್ತು .. ಈಗ ಶೂ ಹಾಗೂ ಸಾಕ್ಸ್ ಯೋಜನೆಗೂ ಕೂಡ ನಾಮ ಹಾಕೋದಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ . ಶಿಕ್ಷಣ ಇಲಾಖೆ ಕರೋನ ಹೆಸರಲ್ಲಿ ಒಂದೊಂದೇ ಮಹತ್ವಕಾಂಕ್ಷೆ ಯೋಜನೆಗೆ ಪಂಗನಾಮ ಹಾಕೋದಕ್ಕೆ ಮುಂದಾಗ್ತಾ ಇದೆ. ಈಗಾಗಲೇ ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ಶಾಕ್ ಕೊಟ್ಟಿದ್ದ ರಾಜ್ಯ ಸರ್ಕಾರ ಈಗ ಮತ್ತೊಂದು ಶಾಕ್ ಕೊಟ್ಟಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಶೂ ಮತ್ತು ಸಾಕ್ಸ್ ಈ ವರ್ಷ ಕೊಡಲ್ಲ ಎಂದಿದ್ದಾರೆ .
ಕಳೆದ ಎರಡು ವರ್ಷದಿಂದ ಕರೋನ ಕಾರಣದಿಂದ ಮನೆಯಲ್ಲೇ ಪಾಠಗಳು ನಡೆದಿದ್ವು ಈ ಬಾರಿ ಶಾಲೆ ಆರಂಭವಾದರೂ ಕೂಡ ಶೂ ಸಾಕ್ಸ್ ಕೊಡಲು ಇಲಾಖೆ ಸಿದ್ಧವಾಗಿಲ್ಲ . ಈ ಈ ಬಗ್ಗೆ ಇಲಾಖೆಯನ್ನ ಪ್ರಶ್ನೆ ಮಾಡಿದ್ರೆ ಕೊರೊನ ಕಾರಣದಿಂದ ದೇಶ ಲರ್ನಿಂಗ್ ಲಾಸ್ ನಲ್ಲಿದೆ. ಗುಣಮಟ್ಟದ ಶಿಕ್ಷಣವನ್ನ ಕೊಡೋದೇ ನಮ್ಮ ಪ್ರಮುಖ ಆದ್ಯತೆ ಅಂತ ತಿಳಿಸೋ ಮೂಲಕ ಶೂ ಹಾಗೂ ಸಾಕ್ಸ್ ಯೋಜನೆಗೆ ಬಾಯ್ ಬಾಯ್ ಅಂತ ಪರೋಕ್ಷವಾಗಿ ಬಿಸಿ ನಾಗೇಶ್ ತಿಳಿಸಿದ್ದಾರೆ.
ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಶೂ ಮತ್ತು ಸಾಕ್ಸ್ ಯೋಜನೆಗೆ ಈ ವರ್ಷ ಸರ್ಕಾರ ಹಣವೇ ಇಟ್ಟಿಲ್ಲ. ಸರ್ಕಾರಿ ಶಾಲೆಗ ಸೇರುವ 1 ರಿಂದ 10ನೇ ತರಗತಿ ವರೆಗಿನ ಬಡ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಹಾಗೂ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧೆ ಮಾಡಲು ರಾಜ್ಯ ಸರ್ಕಾರ ಪ್ರತಿ ವಿದ್ಯಾರ್ಥಿಗೆ ಒಂದು ಜೊತೆ ಶೂ ಮತ್ತು 2 ಎರಡು ಜೊತೆ ಸಾಕ್ಸ್ ನೀಡುವ ಯೋಜನೆ 2016ರಲ್ಲಿ ಜಾರಿ ಮಾಡಲಾಗಿತ್ತು. 2019-20ನೇ ಸಾಲಿನ ಕೊನೆದಾಗಿ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿತ್ತು. 2020-21, 2021-22 ಮತ್ತು ಈ ವರ್ಷ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಭಾಗ್ಯವೇ ಇಲ್ಲದಂತೆ ಆಗಿದೆ.
ಇನ್ನು ಅಂದಹಾಗೆ ಸರ್ಕಾರಿ ಶಾಲೆಗಳಲ್ಲಿ ಸುಮಾರು 60-70 ಲಕ್ಷ ಮಕ್ಕಳು ಈ ಯೋಜನೆಯ ಫಲಾನುಭವಿಗಳು. 1-5ನೇ ತರಗತಿಗೆ 225 ರೂ. 6-8ನೇ ತರಗತಿಗೆ 250 ರೂ. ಮತ್ತು 9-10 ನೇ ತರಗತಿ ವಿದ್ಯಾರ್ಥಿಗಳಿಗೆ 275 ರೂ. ನಂತೆ ಶೂಗೆ ದರ ನಿಗದಿ ಮಾಡಲಾಗಿದೆ. ಆದ್ರೆ ಇದಕ್ಕೆ ಈಗ ಆರ್ಥಿಕ ಕಾರಣ ಎಂದು ಸರ್ಕಾರ ಉತ್ತರಿಸುತ್ತಿದೆ. ಇದೇ ಹಣವನ್ನ ಶಿಕ್ಷಣದ ಗುಣಮಟ್ಟಕ್ಕೆ ಉಪಯೋಗಿಸಲಾಗುತ್ತದೆ ಅಂತ ಹೇಳಿ ನೇರವಾಗಿ ತಿಳಿಸಿದೆ