Publish Date: Sun, 26 May 2019 (14:18 IST)
Updated Date: Sun, 26 May 2019 (14:24 IST)
ಬೆಂಗಳೂರು : ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್ ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿ ಚುನಾವಣೆಯಲ್ಲಿ ಬೆಂಬಲಿಸಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ನನಗೆ ಬೆಂಬಲ ನೀಡಿದ ಬಿಜೆಪಿಗೆ ಧನ್ಯವಾದ ಸಲ್ಲಿಸಬೇಕು.ಸುನಾಮಿ ರೀತಿ ಬಿಜೆಪಿ ಗೆಲುವು ಸಾಧಿಸಿದೆ,ನನ್ನ ಕಡೆಯಿಂದ ಅಭಿನಂದನೆ. ಎಲ್ಲಾ ಪಕ್ಷಗಳು ನನ್ನ ಪರ ನಿಂತಿದ್ದವು. ನನ್ನ ಗೆಲುವಿಗೆ ಯಾರು ಕಾರಣಕರ್ತರು ಅವರೆಲ್ಲರಿಗೂ ನನ್ನ ಧನ್ಯವಾದಗಳು ಎಂದರು.
ಮಂಡ್ಯ ಜಿಲ್ಲೆಯ ರೈತರೇ ನನ್ನ ಮೊದಲ ಆದ್ಯತೆ. ಅದೇ ನನ್ನ ಮೊದಲ ಕರ್ತವ್ಯ ಎಂದು ಸುಮಲತಾ ಹೇಳಿದರು.