Publish Date: Thu, 02 Apr 2020 (09:33 IST)
Updated Date: Thu, 02 Apr 2020 (09:35 IST)
ಕೋಲ್ಕೊತ್ತಾ: ಕೊರೋನಾವೈರಸ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ಬಡವರಿಗೆ 50 ಲಕ್ಷ ಮೌಲ್ಯದ ಅಕ್ಕಿ ವಿತರಿಸುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಮೊದಲೇ ಘೋಷಿಸಿದ್ದರು. ಅದನ್ನು ಈಗ ಖುದ್ದಾಗಿ ಕಾರ್ಯರೂಪಕ್ಕೆ ತರುತ್ತಿದ್ದಾರೆ.
ಗಂಗೂಲಿ ಇದೀಗ ನೇರವಾಗಿ ಅರ್ಹರಿಗೆ ಅಕ್ಕಿ ವಿತರಿಸುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ತಮ್ಮ ತವರಿನ ಬೇಲೂರ್ ರಾಮಕೃಷ್ಣ ಮಠಕ್ಕೆ ತೆರಳಿದ ಗಂಗೂಲಿ 25 ಕೆ.ಜಿ. ಅಕ್ಕಿ ಕೊಡುಗೆಯಾಗಿ ನೀಡಿದ್ದಾರೆ.
ತಮ್ಮ ತಂಡದೊಂದಿಗೆ ತಾವು ಮಾಡುತ್ತಿರುವ ಸ್ವಯಂ ಸೇವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಗಂಗೂಲಿ ಈ ವೇಳೆ ತಾನು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆತಿಲ್ಲ ಎಂದು ಬರೆದುಕೊಂಡಿದ್ದಾರೆ.