ಕೆಆರ್ ಎಸ್ ಡ್ಯಾಂ ಬಗ್ಗೆ ಮಾತನಾಡೋದೇ ತಪ್ಪಾ? ಸುಮಲತಾ

Webdunia
ಬುಧವಾರ, 14 ಜುಲೈ 2021 (15:23 IST)
ಕೆಆರ್ ಎಸ್ ಡ್ಯಾಂ ಸಣ್ಣಪುಟ್ಟ ಬಿರುಕು ಕಾಣಿಸಿಕೊಳ್ಳುತ್ತಿದ್ದು, ಇದರ ದುರಸ್ತಿಗಾಗಿ ಈಗಗಲೇ 67 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ ನಾನು ಡ್ಯಾಂ ಸುರಕ್ಷತೆ ಬಗ್ಗೆ ಮಾತನಾಡಿದರೆ ರಾಜಕೀಯ ಮಾಡ್ತಾರೆ ಅಂತಾರೆ. ಈ ಬಗ್ಗೆ ಮಾತನಾಡೋದೇ ತಪ್ಪಾ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಬುಧವಾರ ಕೆಆರ್ ಎಸ್ ಡ್ಯಾಂ ವೀಕ್ಷಣೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿದೆ ಅಂದರೆ ಪಿಲ್ಲರ್ ನಲ್ಲಿ ಬಿರುಕು ಬಿಟ್ಟಿದೆ ಅಂತಲ್ಲ. ಡ್ಯಾಂನಲ್ಲಿ ಹಲವಾರು ಕಡೆ ಸಣ್ಣಪುಟ್ಟ ಬಿರುಕು ಕಾಣಿಸಿಕೊಳ್ಳುತ್ತಲೇ ಇದೆ. ಸೀಮೆಂಟ್ ಹಾಕಿ ತೇಪೆ ಹಚ್ಚುವ ಮೂಲಕ ಬಿರುಕು ಮುಚ್ಚಲಾಗಿದೆ ಎಂದರು.
ಅಕ್ರಮ ಗಣಿಗಾರಿಕೆಯಿಂದ ಈ ಬಿರುಕುಗಳು ಕಾಣಿಸಿಕೊಳ್ಳತಲೇ ಇದೆ. ಅಲ್ಲದೇ ಡ್ಯಾಂ ಸುತ್ತಮುತ್ತ ನಿರ್ದಿಷ್ಟ ದೂರದವರೆಗೆ ಗಣಿಗಾರಿಕೆ ಮಾಡುವಂತಿಲ್ಲ. ಅದು ಸಕ್ರಮವಾದರೂ ಸರಿ, ಅಕ್ರಮವಾದರೂ ಸರಿ. ಗಣಿಗಾರಿಕೆಯಿಂದ ಡ್ಯಾಂಗೆ ನಾಳೆ ಹೆಚ್ಚು ಕಡಿಮೆ ಆದರೆ ಯಾರು ಜವಾಬ್ದಾರರು ಎಂದು ಅವರು ಪ್ರಶ್ನಿಸಿದರು.
ಎಲ್ಲೆಡೆ ಗಣಿಗಾರಿಕೆ ನಿಷೇಧಿಸಿ ಎಂದು ನಾನು ಹೇಳುತ್ತಿಲ್ಲ. ಸಣ್ಣ ಪುಟ್ಟ ಬಿರುಕುಗಳೇ ನಾಳೆ ದೊಡ್ಡದಾದರೆ ಏನು ಮಾಡುವುದು. ನನ್ನ ಬಳಿ ಸಾಕ್ಷ್ಯಾಧಾರಗಳು ಇರುವುದರಿಂದಲೇ ನನ್ನ ಮಾತಿಗೆ ಬದ್ಧಳಾಗಿದ್ದೇನೆ. ಡ್ಯಾಂಗೆ ಅಪಾಯ ಬರುವವರೆಗೂ ಕಾಯಬೇಕಾ? ಇಂತಹ ಡ್ಯಾಂ ಕಟ್ಟಲು 50 ವರ್ಷ ಆದರೂ ಕಟ್ಟಲು ಸಾಧ್ಯವಿಲ್ಲ ಎಂದು ಸುಮಲತಾ ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್‌, ಸುದೀಪ್ ಭಾಗವಹಿಸಿದ್ದ ವಿವಾಹ ಕಾರ್ಯಕ್ರಮದಲ್ಲಿ ಬೆಂಕಿ ಅವಘಡ

ಚಿತ್ರದುರ್ಗಾ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ಗೆ ಸಹಕೈದಿಗಳಿಂದ ಬೆದರಿಕೆ

Jabalpur Tragedy: ನಾಲ್ಕು ವರ್ಷದ ಮಗುವಿನ ಮೃತದೇಹ ಪತ್ತೆ ಮೂಲಕ ಶೋಧ ಕಾರ್ಯ ಅಂತ್ಯ

ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಕೊಟ್ಟ ಶಾಸಕ ಬಸವರಾಜ ರಾಯರೆಡ್ಡಿ

ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮತ ಮರು ಎಣಿಕೆಯಲ್ಲಿ ದೊಡ್ಡ ಪಿತೂರಿ: ಶಿವಕುಮಾರ್ ಕಿಡಿ

ಮುಂದಿನ ಸುದ್ದಿ
Show comments