ಪದವಿ ಕಾಲೇಜುಗಳನ್ನ ಜುಲೈ ಕೊನೆಯ ವಾರದಲ್ಲಿ ಆರಂಭಿಸುವ ಸಾಧ್ಯತೆ ಇದೆ. ಈಗಾಗಲೇ ಆನ್ ಲೈನ್ ತರಗತಿಗಳು ಪ್ರಾರಂಭವಾಗಿದ್ದು,ಭೌತಿಕ ತರಗತಿಗಳನ್ನ ಆರಂಭಿಸಲು ವಿವಿ ಕುಲಪತಿಗಳಿಗೆ ಸೂಚನೆ ನೀಡಲಾಗಿದೆ.ವ್ಯಾಕ್ಸಿನ್ ಡ್ರೈವ್ ಮುಗಿದ ನಂತರ ತರಗತಿಗಳನ್ನ ಪ್ರಾರಂಭಿಸುವಂತೆ ಉನ್ನತ ಶಿಕ್ಷಣ ಇಲಾಖೆಯಿಂದ ಆದೇಶ ಬಂದಿದೆ. ಹೀಗಾಗಿ ಇದೇ 19 ರಂದು ಭೌತಿಕ ತರಗತಿಗಳ ಪ್ರಾರಂಭಿಸುವ ವಿಚಾರ ಕುರಿತು ಸಭೆ ನಡೆಯಲಿದೆ.ಸಭೆಯಲ್ಲಿ ಯಾವ ದಿನದಂದು ತರಗತಿಗಳನ್ನ ಪ್ರಾರಂಭಿಸಬೇಕು ಅನ್ನೋದು ನಿರ್ಧಾರವಾಗಲಿದ್ದು, ಈಗಾಗಲೇ ಕೆಲ ವಿವಿಗಳಲ್ಲಿ ಶೇ.60 ರಿಂದ 80 ರಷ್ಟು ವ್ಯಾಕ್ಸಿನ್ ಹಾಕಲಾಗಿದೆ.ಕಾಲೇಜು ಆರಂಭದ ಕುರಿತು ಇದೇ 19 ರಂದು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದು ನಂತರ ಭೌತಿಕ ತರಗತಿಗಳ ಪ್ರಾರಂಭಕ್ಕೆ ಡೇಟ್ ಫಿಕ್ಸ್ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.