Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೈಗೆ ಬಾರದ ಕಬ್ಬು ಬಾಕಿ ಬಿಲ್ಲು: ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ರೈತರು

ಕೈಗೆ ಬಾರದ ಕಬ್ಬು ಬಾಕಿ ಬಿಲ್ಲು: ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ರೈತರು
ಬೆಳಗಾವಿ , ಸೋಮವಾರ, 2 ಜುಲೈ 2018 (18:37 IST)
ಕುಂದಾನಗರಿ ಬೆಳಗಾವಿಯ ರೈತರ ಗೋಳು  ಹೇಳತ್ತಿರದ್ದಾಗಿದೆ.  ಕಷ್ಟ ಪಟ್ಟು ಬೆಳೆದ ಬೆಳೆಗೆ  ಬೆಂಬಲ ಬೆಲೆ  ಸಿಗಲ್ಲ ಅನ್ನೊ ನೋವು ಒಂದು ಕಡೆಯಾದರೆ,  ಸಾಲಮಾಡಿ  ಕಬ್ಬು  ಬೆಳೆದು ಕಾರ್ಖಾನೆಗೆ ಕಳುಹಿಸಿ  ಐದು ವರ್ಷ ಕಳೆದರೂ ಇನ್ನು ರೈತರ ಕೈಗೆ ಕಾರ್ಖಾನೆಗಳಿಂದ  ಕಬ್ಬಿನ ಬಾಕಿ ಬಿಲ್ಲ  ಕೈ ಸೇರಿಲ್ಲ ಅನ್ನೊ ನೋವು ಇನ್ನೊಂದು ಕಡೆ. ಕಬ್ಬಿನ ಬಾಕಿ  ಬಿಲ್ಲು ನೀಡುವಂತೆ ವರ್ಷಗಳಿಂದ ಬೇಡಿಕೊಂಡರೂ  ಜಿಲ್ಲಾಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತ್ತಿದೆ. ಇನ್ನು  ಇತ್ತ ಸಾಲಕ್ಕೆ  ಹೆದರಿ ರಾಜ್ಯ ಸರ್ಕಾರಕ್ಕೆ ಮತ್ತು  ಜಿಲ್ಲಾಡಳಿತಕ್ಕೆ    ರೈತರು ದಯಾಮರಣಕ್ಕೆ ಅರ್ಜಿ ಬರೆದಿದ್ದಾರೆ.

 
ಒಂದು ಕಡೆ ಅನ್ನ ಬೆಳೆಯುವ ರೈತ ಸಾಲದ‌ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ. ಇನ್ಮೊಂದು ಕಡೆ ಅತಿವೃಷ್ಟಿ ಅನಾವೃಷ್ಠಿಯಿಂದ ಕಂಗಾಲಾಗುತ್ತಿದ್ದಾನೆ. ಆದರೆ ಈ ಕುಂದಾನ ನಗರಿ ಬೆಳಗಾವಿಯಲ್ಲಿ ರೈತ ಕುಟುಂಬಗಳು  ಕಬ್ಬಿನ ಬಾಕಿ ಬಿಲ್ಲಗಾಗಿ ಮನನೊಂದು ದಯಾಮರಣಕ್ಕೆ ಅರ್ಜಿ  ಬರೆದಿದ್ದಾರೆ. ಹೌದು ಈ ಸರ್ಕಾರಕ್ಕೆ  ಯಾವಾಗ ಈ ರೈತರ ನೋವಿನ ಕೂಗು ಕೇಳಿಸುತ್ತೊ ಆ ದೇವರೆ ಬಲ್ಲ. ಮೊನ್ನೆಯಷ್ಟೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾಮದ ರೈತರು ದಯಾಮರಣಕ್ಕೆ  ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ  ಅರ್ಜಿ ಸಲ್ಲಿಸಿದ್ದರು . ಈಗಾ ಮತ್ತೆ ಇವತ್ತು  ಅದೇ ಖಾನಾಪುರ ತಾಲೂಕಿನ‌ ದೇವಲತ್ತಿ ಗ್ರಾಮದ ರೈತ ಕುಟುಂಬಗಳು ಮತ್ತೆ  ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.

 ದೇವಲತ್ತಿ ಗ್ರಾಮದ ಪುಂಡಲಿಕ್  ಕುಟುಂಬದ, ಉಮೇಶ್ ಕುಟುಂಬ ಸೇರಿದಂತೆ ಸುಮಾರು 5 ಕುಟುಂಬಗಳು  ಕಬ್ಬಿ‌ನ  ಬಾಕಿ ವಸೂಲಿ ಮಾಡಿಕೊಡಬೇಕು ಎಂದು ಆಗ್ರಹಿಸಿ  ಜಿಲ್ಲಾಧಿಕಾರಿಗೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಸಾಕ್ಷಿಗಳ ವಿಚಾರಣೆ