Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿ: ರೈತರ ಮುಖದಲ್ಲೀಗ ಮಂದಹಾಸ

ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿ: ರೈತರ ಮುಖದಲ್ಲೀಗ ಮಂದಹಾಸ
ಶ್ರೀರಂಗಪಟ್ಟಣ , ಶುಕ್ರವಾರ, 29 ಜೂನ್ 2018 (17:25 IST)
ಬರೋಬ್ಬರಿ ಐದು ವರ್ಷಗಳ ಬಳಿಕ ಇದೀಗ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯ ಹಂತಕ್ಕೆ ತಲುಪಿದೆ. ಐದು ವರ್ಷಗಳಿಂದ ಸಮರ್ಪಕ ನೀರಿಲ್ಲದೇ ಬರದಿಂದ ಕಂಗೆಟ್ಟಿದ್ದ ಕಾವೇರಿ ಕೊಳ್ಳದ ರೈತರ ಮುಖದಲ್ಲೀಗ ಮಂದಹಾಸ ಮೂಡಿದೆ.  
 
ಜೀವನದಿ ಕಾವೇರಿಯ ಬೀಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೃಷ್ಣರಾಜ ಸಾಗರ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿ ಐದು ವರ್ಷವಾಗಿತ್ತು. 124.80 ಅಡಿ ನೀರು ಸಂಗ್ರಹದ ಸಾಮರ್ಥ್ಯವುಳ್ಳ ಅಣೆಕಟ್ಟೆ 2013ರಲ್ಲಿ ಸಿದ್ದರಾಮಯ್ಯ ಸಿಎಂ ಆದಾಗ ಸಂಪೂರ್ಣ ಭರ್ತಿಯಾಗಿತ್ತು. ಆಗ ಸಿದ್ದು ಭಾಗಿನ ಸಹ ಅರ್ಪಿಸಿದ್ರು. ಆದ್ರೆ ಇದುವರೆಗೆ ಅಣೆಕಟ್ಟೆ ಸಂಪೂರ್ಣ ತುಂಬಿರಲಿಲ್ಲ. 


ಇದೀಗ ಅಣೆಕಟ್ಟೆ ಬರೋಬ್ಬರಿ 106ಅಡಿಯಷ್ಟು ಭರ್ತಿಯಾಗಿದ್ದು, ಇನ್ನು ಕೇವಲ 18 ಅಡಿ ತುಂಬಿದ್ರೆ ಸಂಪೂರ್ಣ ಅಣೆಕಟ್ಟೆ ಭರ್ತಿಯಾದಂತಾಗುತ್ತದೆ. ವಾಡಿಕೆಯಂತೆ. 106 ಅಡಿ ನೀರು ತುಂಬಲು ಪ್ರತಿ ವರ್ಷ ಅಕ್ಟೋಬರ್ ತಿಂಗಾಳಾದ್ರೂ ಬೇಕಿತ್ತು. ಆದ್ರೆ ಈ ಬಾರಿ ಜೂನ್ ತಿಂಗಳಲ್ಲಿಯೇ 106 ಅಡಿ ತಲುಪಿದ್ದು, ಅಣೆಕಟ್ಟೆ ಭಾಗಶ: ತುಂಬಲಿದೆ ಎಂಬುದು ರೈತರ ಮಾತಾಗಿದ್ದು, ಬೆಳೆಗಳಿಗೆ ಈ ಬಾರಿ ಸಮರ್ಪಕ ನೀರು ಸಹ ದೊರೆಯಲಿದೆ ಎಂಬ ಸಂತಸ ರೈತರು ವ್ಯಕ್ತಪಡಿಸುತ್ತಾರೆ.
 
ಮಡಿಕೇರಿ ಜಿಲ್ಲೆಯ ತಲಕಾವೇರಿ ಕಾವೇರಿಯ ಉಗಮ ಸ್ಥಾನವಾಗಿರುವುದರಿಂದ ಮಡಿಕೇರಿಯಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಕೆ.ಆರ್.ಎಸ್. ಅಣೆಕಟ್ಟೆಗೆ  ನೀರು ಹರಿದು ಬರುತ್ತಿದೆ. ಈಗಾಗಲೇ ಹೇಳಿದಂತೆ 106 ಅಡಿ ನೀರು ತಲುಪಲು ಸೆಪ್ಟೆಂಬರ್ ವರೆಗೆ ಕಾಯಬೇಕಿತ್ತು. ಆದ್ರೆ ಈ ಬಾರಿ ಮಾತ್ರ ಜೂನ್ ತಿಂಗಳಿಗೆ 106 ಅಡಿ ಮುಟ್ಟಿದ್ದು, ಸುಮಾರು 20 ವರ್ಷಗಳ ಹಿಂದೆ ಜೂನ್ ತಿಂಗಳಲ್ಲೇ ಇಷ್ಟು ನೀರು ಭರ್ತಿಯಾಗಿತ್ತಂತೆ. ಮಳೆ ಇದೇ ಪ್ರಮಾಣದಲ್ಲಿ ಇನ್ನೊಂದು ತಿಂಗಳು ಬಂದ್ರೆ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಲಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸಪ್‍ನಲ್ಲಿ ಫೋಟೋ ಕಳಿಸುವಂತೆ ವಿದ್ಯಾರ್ಥಿನಿಗೆ ಕಿರುಕುಳ: ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿರುದ್ಧ ಆಕ್ರೋಶ