Publish Date: Wed, 10 Oct 2018 (09:18 IST)
Updated Date: Wed, 10 Oct 2018 (09:26 IST)
ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಇನ್ ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ನಾಡಹಬ್ಬ ದಸರಾಗೆ ಚಾಲನೆ ನೀಡಿದರು.
ಇಂದು ಬೆಳಿಗ್ಗಿನ ಮುಹೂರ್ತದಲ್ಲಿ ಸುಧಾಮೂರ್ತಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಉದ್ಘಾಟನಾ ಭಾಷಣ ಮಾಡಿದ್ದಾರೆ.
ಸುಧಾಮೂರ್ತಿ ಮಹಿಳೆಯರಿಗೆ ಸ್ಪೂರ್ತಿ. ರಾಜ್ಯದಲ್ಲಿ ಕೊಡಗು ಪ್ರವಾಹ ಸೇರಿದಂತೆ ಯಾವುದೇ ಕಷ್ಟ ಬಂದಾಗಲೂ ಸ್ಪಂದಿಸಿದ ದಿಟ್ಟ, ಉದಾತ್ತ ಮನೋಭಾವದ ಮಹಿಳೆ. ಅದೇ ಕಾರಣಕ್ಕೆ ಅವರನ್ನೇ ದಸರಾ ಉತ್ಸವಕ್ಕೆ ಚಾಲನೆ ನೀಡಲು ಆಯ್ಕೆ ಮಾಡಲಾಯಿತು ಎಂದರು.
ಈ ಬಾರಿಯ ವಿಶೇಷವೆಂದರೆ ಯದುವಂಶದ ನೂತನ ಕುಡಿ ಆದ್ಯವೀರ್ ಒಡೆಯರ್. ರಾಜಮನೆತನದ ನೂತನ ಕುಡಿಗೆ ಇದು ಮೊದಲ ದಸರಾ ಎನ್ನುವುದು ವಿಶೇಷ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.