Publish Date: Wed, 03 Oct 2018 (19:34 IST)
Updated Date: Wed, 03 Oct 2018 (19:38 IST)
ಪ್ರಖ್ಯಾತ ಮೈಸೂರು ದಸರಾ ಹಬ್ಬದ ಉದ್ಘಾಟನೆಗಾಗಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ಸರಕಾರದ ಪರವಾಗಿ ಅಧಿಕೃತ ಆಹ್ವಾನ ನೀಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವ ಸಾ.ರಾ.ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಜಿಲ್ಲಾಧಿಕಾರಿ ಅಭಿರಾಮ್, ಜಿ. ಶಂಕರ್, ಮೈಸೂರು ಪೇಟ ತೊಡಿಸಿ ದಸರಾ ಮಹೋತ್ಸವ ಉದ್ಘಾಟಿಸುವಂತೆ ಅಧಿಕೃತ ಆಹ್ವಾನ ನೀಡಿದರು.
ತಮ್ಮ ಮೆಚ್ಚಿನ ಊರುಗಳಲ್ಲಿ ಮೈಸೂರು ಒಂದಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಅವಕಾಶ ನೀಡಿ ಆಹ್ವಾನ ನೀಡಿರುವುದು ಸಂತಸ ಕೊಟ್ಟಿದೆ ಎಂದು ಸುಧಾಮೂರ್ತಿ ಭಾವುಕರಾಗಿ ನುಡಿದರು.