Publish Date: Mon, 17 Jul 2023 (19:00 IST)
Updated Date: Mon, 17 Jul 2023 (20:01 IST)
ಪರೀಕ್ಷೆಯಲ್ಲಿ ನಕಲು ಮಾಡಿದ ಎಂಬ ಕಾರಣಕ್ಕೆ ಕ್ಲಾಸ್ ನಿಂದ ಹೊರಗೆ ಹಾಕಿದ್ದರು. ಇದರಿಂದ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಯಂಡಹಳ್ಳಿ ಯ ಪಿಇಎಸ್ ಕಾಲೇಜಿನಲ್ಲಿ ಎರಡನೇ ಸೆಮಿಸ್ಟರ್ ಓದುತ್ತಿದ್ದ ಆದಿತ್ಯ ಪ್ರಭುದೇವ್ ಮೃತ ವಿದ್ಯಾರ್ಥಿ. ಮಂಗಳೂರು ಮೂಲದವನ್ನಾಗಿದ್ದು .ಗಿರಿನಗರದಲ್ಲೆ ಕುಟುಂಬದ ಜತೆ ಗಿರಿನಗರದಲ್ಲಿ ವಾಸವಾಗಿದ್ದರು. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಕೂಡ ಅಷ್ಟು ಚೆನ್ನಾಗಿ ಬರೆದಿಲ್ಲ ಎಂದು ಬೇಸರ ಮಾಡಿಕೊಂಡಿದ್ದನಂತೆ, ಕ್ಲಾಸ್ ನಿಂದ ಹೊರಗೆ ಬಂದವನೇ ಎಂಟನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಘಟನೆ ಸಂಭಂದ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಗಾಗಿ ಆರ್ ಆರ್ ನಗರ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ.