Publish Date: Mon, 17 Jul 2023 (17:44 IST)
Updated Date: Mon, 17 Jul 2023 (19:51 IST)
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೇಸ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.ಈ ವೇಳೆ ಮಾತನಾಡಿದ ಬಸವನಗೌಡ ಪಾಟೀಲ್ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಎರಡು ತಿಂಗಳಾಗಿದೆ.ಬರಗಾಲದ ಚಾಯೆ ಎದುರಾಗಿದೆ.ರೈತರ ಆತ್ಮಹತ್ಯೆ ಹೆಚ್ಚಿದೆ.ಆತಂಕದ ಛಾಯೆ ಹೆಚ್ಚಾಗಿದೆ.ಹಿಂದೂ ಕಾರ್ಯಕರ್ತರ, ಜೋಡಿ ಕೊಲೆಯಾಗಿದೆ.ನರೇಂದ್ರ ಮೋದಿಯವರನ್ನ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಒಟ್ಟಾಗ್ತಿದ್ದಾರೆ.ಕರ್ನಾಟಕದಲ್ಲಿ ಜಾಮೀನು ಮೇಲೆ ಇರೋ ಎಲ್ಲಾ ಕುಟುಂಬಗಳು ಒಟ್ಟಿಗೆ ಸೇರಿವೆ.ಮತ್ತೆ ಮೋದಿ ಬಂದ್ರೆ ಜೈಲೇ ಗತಿ ಅನ್ನೋದು ಗೊತ್ತಾಗಿದೆ.ಹಾಗಾಗಿ ಕಾಶ್ಮೀರದಿಂದ ಕನ್ಯಾ ಕುಮಾರಿವರೆಗಿನ ಎಲ್ಲಾ ದರೋಡೆಕೋರರು ಒಟ್ಟಿಗೆ ಸೇರ್ತಿದ್ದಾರೆ ಎಂದು ಬಸವನಗೌಡ ಪಾಟೀಲ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.