ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ನೀವೇ ಭಾಗಿಯಾಗಿದ್ದೀರಿ. ಹೈಕೋರ್ಟ್ ನ್ಯಾಯಾದೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಚಾಮರಾಜನಗರ ದುರಂತದ ತನಿಖೆ ಕೂಡ ಮಾಡಬೇಕು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಅಕ್ರಮ, ಚಾಮರಾಜನಗರ ದುರಂತ ತನಿಖೆಯನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಎಸಿಬಿಗೆ ಪ್ರಕರಣವನ್ನು ನೀಡಬೇಕು. ತಪ್ಪು ಯಾರೇ ಮಾಡಿದ್ದರೂ ತಪ್ಪೇ. ಈಗಿನ ರಿಪೋರ್ಟ್ ಏನಿದೆ ಬಹಿರಂಗ ಮಾಡಿ. ನಿಮ್ಮ ಮುತ್ತು ರತ್ನಗಳನ್ನ ಬಹಿರಂಗ ಮಾಡಿ. ನಮ್ಮ ಪೋಟೋ ಬಿಟ್ರಲ್ಲ ಹಾಗೆ ಎಂಬುದಾಗಿ ಹೇಳಿದ್ದಾರೆ. ನಿಮ್ಮ ಕಾರ್ಯಕರ್ತರನ್ನ ಒಳಸಿಕೊಂಡು ಅಕ್ರಮ ಮಾಡಿ, 70-80 ಲಕ್ಷ ವಸೂಲಿ ಮಾಡಿದ್ದೀರಿ. ನಾನು ನಿಮಗೆ ಶಿಕ್ಷೆ ಕೊಡಲ್ಲ, ನಾನು ಜಡ್ಜ್ ಅಲ್ಲ. ಈ ರಾಜ್ಯದ ಮತದಾರರು ಕಿತ್ತೊಗೆಯುತ್ತಾರೆ.