Publish Date: Sat, 30 Apr 2022 (14:46 IST)
Updated Date: Sat, 30 Apr 2022 (14:50 IST)
ಬೆಂಗಳೂರಿನ ಕೊಳದ ಮಠದ ಶಾಂತವೀರ ಸ್ವಾಮೀಜಿ ಹೃದಯಾಘಾತದಿಂದ ಇಂದು ಮುಂಜಾನೆ ಶಿವೈಕ್ಯರಾಗಿದ್ದಾರೆ.
ಶುಕ್ರವಾರ ಮಹಾಲಕ್ಷ್ಮಿ ಲೇಔಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಆದರೆ ಮಾರನೇ ದಿನವಾದ ಇಂದು ಮುಂಜಾನೆ ದಿಢೀರನೆ ಎದೆನೋವು ಕಾಣಿಸಿಕೊಂಡಿದ್ದು, ಶಿವೈಕ್ಯರಾಗಿದ್ದಾರೆ. ಶ್ರೀಗಳಿಗೆ 80 ವರ್ಷ ವಯಸ್ಸಾಗಿತ್ತು.
ಭಕ್ತರ ದರ್ಶನಕ್ಕೆ ಮಠದ ಆವರಣದಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ಇಂದು ಸಂಜೆಯೇ ಮಠದ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಶಾಂತಿನಗರದಲ್ಲಿರುವ ಮಠದಲ್ಲಿ ಸಂಜೆ ವಿಧಿವಿಧಾನ ನಡೆಯಲಿದ್ದು, ಗಣ್ಯರು ಶ್ರೀಗಳ ಪಾರ್ಥೀವ ಶರೀರದ ದರ್ಶನ ಪಡೆಯುತ್ತಿದ್ದಾರೆ.
geetha
Publish Date: Sat, 30 Apr 2022 (14:46 IST)
Updated Date: Sat, 30 Apr 2022 (14:50 IST)