Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಟ್ಟಡ ದುರಂತದಲ್ಲಿ ಬದುಕುಳಿದ ಬಾಲೆಯ ದತ್ತು ಪಡೆದ ರಾಜ್ಯ ಸರ್ಕಾರ

ಕಟ್ಟಡ ದುರಂತದಲ್ಲಿ ಬದುಕುಳಿದ ಬಾಲೆಯ ದತ್ತು ಪಡೆದ ರಾಜ್ಯ ಸರ್ಕಾರ
ಬೆಂಗಳೂರು , ಮಂಗಳವಾರ, 17 ಅಕ್ಟೋಬರ್ 2017 (09:13 IST)
ಬೆಂಗಳೂರು: ಈಜಿಪುರದಲ್ಲಿ ನಿನ್ನೆ ನಡೆದ ಬಹುಮಹಡಿ ಕಟ್ಟದ ದುರಂತದಲ್ಲಿ ಹೆತ್ತವರನ್ನು ಕಳೆದುಕೊಂಡು, ಬದುಕುಳಿದ ಮೂರು ವರ್ಷದ ಬಾಲಕಿ ಸಂಜನಾಳನ್ನು ಕರ್ನಾಟಕ ಸರ್ಕಾರ ದತ್ತು ಪಡೆದಿದೆ.

 
ಸೋಮವಾರ ನಡೆದ ದುರಂತದಲ್ಲಿ ಆಕೆಯ ಪೋಷಕರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರು. ಮೂರು ವರ್ಷದ ಬಾಲಕಿ ಸಂಜನಾ ಮಾತ್ರ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಳು.

‘ಸರ್ಕಾರ ಈ ಹುಡುಗಿಯನ್ನು ದತ್ತು ಪಡೆಯಲು ನಿರ್ಧರಿಸಿದ್ದು, ಆಕೆಯ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಲಿದೆ’ ಎಂದು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ಇದೇ ವೇಳೆ ಕಟ್ಟಡ ದುರಂತದಲ್ಲಿ ಮಡಿದವರ ಕುಟುಂಬಕ್ಕೆ 5 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಭಾರತದ ಸಂಸ್ಕೃತಿಯನ್ನು ನಾಶ ಮಾಡುವುದೇ ಬಿಜೆಪಿ ಅಜೆಂಡಾ’