Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಣ್ಣೆ ಹೊಡೆಯೋರಿಗೊಂದು ಕಿಕ್ ಕೊಡುವ ಸುದ್ದಿ!

ಎಣ್ಣೆ ಹೊಡೆಯೋರಿಗೊಂದು ಕಿಕ್ ಕೊಡುವ ಸುದ್ದಿ!
Bangalore , ಸೋಮವಾರ, 24 ಜುಲೈ 2017 (15:48 IST)
ಬೆಂಗಳೂರು: ಹೆದ್ದಾರಿಗಳ ಆಸುಪಾಸಿನಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಇತ್ತೀಚೆಗಿನ ಕೇಂದ್ರ ಸರ್ಕಾರದ ಆದೇಶ ನೋಡಿ ಬೇಸರದಲ್ಲಿದ್ದ ಪಾನ ಪ್ರಿಯರಿಗೆ ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.


ಕರ್ನಾಟಕದಾದ್ಯಂತ 900 ಮದ್ಯದಂಗಡಿಗಳನ್ನು ತೆರೆಯಲು ನಿರ್ಧರಿಸಿದೆ. ಇದರಲ್ಲಿ 30 ಬೆಂಗಳೂರಿನಲ್ಲೇ ಆರಂಭವಾಗಲಿದೆ. ಅಬಕಾರಿ ಸುಂಕ ಸಂಗ್ರಹದಲ್ಲಿ ಗಣನೀಯ ಏರಿಕೆಯಾದ ಹಿನ್ನಲೆಯಲ್ಲಿ ಸರ್ಕಾರ ಮತ್ತಷ್ಟು ಮದ್ಯದಂಗಡಗಳಿಗೆ ಚಾಲನೆ ನೀಡಲು ಮುಂದಾಗಿದೆ.

ಮೈಸೂರ್ ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಮದ್ಯದಂಗಡಿಗಳನ್ನು ನಡೆಸಲಿದೆ. ಈಗಾಗಲೇ ಎಂಎಸ್ಐಎಲ್ ನಡೆಸುವ 463 ಮದ್ಯದಂಗಡಿಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆದ್ದಾರಿ ನಿಯಮವನ್ನು ಗಮನದಲ್ಲಿಟ್ಟುಕೊಂಡೇ ಹೊಸ ಮದ್ಯದಂಗಡಿಗಳನ್ನು ತೆರೆಯಲಾಗುವುದು ಎಂದು ಹಣಕಾಸು ಮುಖ್ಯ ಕಾರ್ಯದರ್ಶಿ ಎಸ್ ಎನ್ ಪ್ರಸಾದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೀರು, ವಿದ್ಯೆ, ಮನೆ ಕೊಟ್ಟವರನ್ನು ಜನ ಮರೆಯೋಲ್ಲ,ಜೈಲಿಗೆ ಹೋದವರನ್ನೂ ಜನ ಮರೆಯೋಲ್ಲ: ಸಿಎಂ