ನೀವು ಮೀನು ತಿನ್ನುವ ಪ್ರಿಯರಾಗಿದ್ದರೆ ಈ ಸುದ್ದಿಯನ್ನು ಮಿಸ್ ಮಾಡದೇ ಓದಿ.
ಮೀನಿನ ಉತ್ಪಾದನೆ ದ್ವಿಗುಣ ಗೊಳಿಸುವುದರೊಂದಿಗೆ ಕಟ್ಟ ಕಡೆಯ ಮೀನುಗಾರರಿಗೆ ಸರಕಾರದ ಆರ್ಥಿಕ ಸೌಲಭ್ಯಗಳು ಲಭ್ಯವಾಗುವಂತೆ ಮಾಡಲು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊಸ ಯೋಜನೆಯನ್ನು ರೂಪಿಸಲಾಗುವುದು. ಹೀಗಂತ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸರಕಾರದ ಆದಾಯ ಹೆಚ್ಚಿಸಲು ರಾಜ್ಯದ ಕೆರೆ ಹಾಗೂ ಸರೋವರಗಳ ಪಾರದರ್ಶಕ ಟೆಂಡರ್ ಅಥವಾ ಗುತ್ತಿಗೆ ನೀಡಲು ಕ್ರಮವಹಿಸಿ ಸರಕಾರದ ಆದಾಯ ಹೆಚ್ಚಿಸುವುದರ ಜೊತೆಗೆ ಮಧ್ಯೆ ಆಗುವ ಸೋರಿಕೆಯನ್ನು ತಡೆಯುವ ಉದ್ದೇಶ ಹೊಂದಲಾಗಿದೆ. ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ ನೀಡುವ ಮೂಲಕ ವ್ಯವಸ್ಥಿತವಾಗಿ ಮೀನು ಮಾರಾಟವನ್ನು ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇದೆ ಎಂದರು.
ಇಲಾಖೆ ವತಿಯಿಂದ ರಾಜ್ಯದ 11 ಕಡೆಗಳಲ್ಲಿ ಮೀನೂಟದ ‘ಮತ್ಸ್ಯ ದರ್ಶಿನಿ’ ಹೊಟೇಲ್ ಆರಂಭಿಸುವ ಮೂಲಕ ಮೀನು ಮಾರಾಟ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮೀನು ಮರಿಗಳ ಉತ್ಪಾದನೆ ಕಡಿಮೆ ಇರುವ ಕಡೆ ಹೊಸ ಕೆರೆಗಳನ್ನು ಅಭಿವೃದ್ಧಿಪಡಿಸಿ ಮೀನು ಸಾಕಾಣಿಕೆ ಕೇಂದ್ರವನ್ನು ಆರಂಭಿಸಲಾಗುವುದು ಎಂದಿದ್ದಾರೆ.