Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ನಾಟಕ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರಕಟ

ಕರ್ನಾಟಕ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರಕಟ
ದಾವಣಗೆರೆ , ಬುಧವಾರ, 26 ಫೆಬ್ರವರಿ 2020 (19:33 IST)
ಕರ್ನಾಟಕ ಬಯಲಾಟ ಅಕಾಡೆಮಿಯ 2019-20 ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ಮತ್ತು ಗೌರವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
 

ಅಕಾಡೆಮಿ ಅಧ್ಯಕ್ಷ ಡಾ.ಟಿ.ಬಿ.ಸೊಲಬಕ್ಕನವರ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದರು. ಐದು ಕಲಾವಿದರಿಗೆ ಗೌರವ ಪ್ರಶಸ್ತಿ ಮತ್ತು 10 ಜನರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.

ದೊಡ್ಡಾಟ ಪ್ರಕಾರದಲ್ಲಿ ದಾವಣಗೆರೆ ಜಿಲ್ಲೆಯ ಎನ್.ರಂಗನಾಥ್, ಬಳ್ಳಾರಿಯ ಚಲವಾದಿ ಈರಣ್ಣ ಕೆಂಚಪ್ಪ, ಚಿತ್ರದುರ್ಗ ಜಿಲ್ಲೆಯ ಸಣ್ಣಬೋರಯ್ಯ, ಕೊಪ್ಪಳ ಜಿಲ್ಲೆಯ ಎಂ.ಸೋಮಶೇಖರಪ್ಪ, ಹಾವೇರಿಯ ಫಿರೋಜ್ ಶಿಂಧೆ, ಸಣ್ಣಾಟ ಪ್ರಕಾರದಲ್ಲಿ ಬೆಳಗಾವಿಯ ಭೀಮಪ್ಪ ರಾಮಪ್ಪ ಹುದ್ದಾರ, ಶ್ರೀಕೃಷ್ಣ ಪಾರಿಜಾತ ಕಲಾವಿದ ಬಾಗಲಕೋಟೆಯ ಚಿದಾನಂದ ಹಲಗಲಿ, ಬೆಳಗಾವಿ ಜಿಲ್ಲೆಯ ಶ್ರೀಮತಿ ಯಲ್ಲವ್ವ ಭೀಮಪ್ಪ ಮಾದರ, ಸಣ್ಣಾಟ ಕಲಾವಿದ ವಿಜಯಪುರ ಜಿಲ್ಲೆಯ ಬಸವಂತ ಸೋಮಪ್ಪ ಮಾಳಿ, ಸೂತ್ರದ ಗೊಂಬೆ ಕಲಾವಿದ ಬಳ್ಳಾರಿ ಜಿಲ್ಲೆಯ ಅಧಿಕಾರಿ ಬಸಲಿಂಗಪ್ಪ ಸೇರಿದಂತೆ ವಿವಿಧ ಪ್ರಕಾರಗಳ 10 ಜನರಿಗೆ ಈ ಬಾರಿ ವಾರ್ಷಿಕ ಪ್ರಶಸ್ತಿ ನೀಡಲಾಗಿದೆ ಎಂದರು.

ಅಕಾಡೆಮಿಯ ಗೌರವ ಪ್ರಶಸ್ತಿಗಳನ್ನು ದೊಡ್ಡಾಟ ಕಲಾವಿದ ಬಳ್ಳಾರಿ ಜಿಲ್ಲೆಯ ದೂಫದ ಕೊಟ್ರಪ್ಪ, ಧಾರವಾಡದ ಶ್ರೀ ಶೈಲ ಹುದ್ದಾರ, ಕೊಪ್ಪಳ ಜಿಲ್ಲೆಯ ಎಸ್.ಎಸ್.ಪಾಟೀಲ, ಶ್ರೀಕೃಷ್ಣ ಪಾರಿಜಾತ ಕಲಾವಿದೆ ಶ್ರೀಮತಿ ಶಾಂತವ್ವ ಜಾಲಿಕಟ್ಟೆ, ಬೆಳಗಾವಿ ಜಿಲ್ಲೆಯ ಬಾಪು ಶೌಕತ್ ತಾಸೆವಾಲೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಇದೇವೇಳೆ 2017-18 ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಸಾಧಕರ ಹೆಸರು ಪ್ರಕಟಿಸಿದ ಅವರು, ಸಾರಥಿ ಪುಸ್ತಕಕ್ಕಾಗಿ ಮೈಸೂರು ಜಿಲ್ಲೆಯ ಡಾ.ಸುಜಾತಾ ಅಕ್ಕಿ, ನಾಡೋಜ ಯಲ್ಲನ್ನ ರೊಡ್ಡಪ್ಪವನರ ಕುರಿತ ಪುಸ್ತಕಕ್ಕಾಗಿ ಬಳ್ಳಾರಿ ಜಿಲ್ಲೆಯ ಡಾ.ವೀರೇಶ್ ಬಡಿಗೇರ ಅವರನ್ನು ಆಯ್ಕೆ ಮಾಡಲಾಗಿದೆ. 2018-19 ನೇ ಸಾಲಿನ ಪುಸ್ತಕ ಪ್ರಶಸ್ತಿಗಾಗಿ ಬಾಗಲಕೋಟೆಯ ಡಾ.ಶ್ರೀರಾಮ ಇಟ್ಟಣ್ಣವರ, ಧಾರವಾಡ ಜಿಲ್ಲೆಯ ಎಂ.ಎಸ್.ಮಾಳವಾಡ ಅವರಿಗೆ ಪ್ರಶಸ್ತಿ ನೀಡಲಾಗಿದೆ ಎಂದರು.

ಮಾರ್ಚ್ 15 ರಂದು ಸಂಜೆ ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಯಸ್ಸಾಯ್ತು ಎಂದೋರಿಗೆ ಒಳ್ಳೆಯದಾಗಲಿ ಎಂದ ಯಡಿಯೂರಪ್ಪ