Select Your Language

Notifications

webdunia
webdunia
webdunia
webdunia

ಇಂದಿನಿಂದ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ., ಪಿಯುಸಿ ಕ್ಲಾಸ್ ಪ್ರಾರಂಭ

ಬೆಂಗಳೂರು
ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ., ಪಿಯುಸಿ ಕ್ಲಾಸ್  ಪ್ರಾರಂಭವಾಗಿದೆ, ವಿದ್ಯಾರ್ಥಿಗಳು ಶಾಲೆಗೆ ತೆರಳಿ ಸಂತಸ ವ್ಯಕ್ತಪಡಿಸಿದ್ದಾರೆ.

ಹಾಗೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಆನೇಕಲ್ ನ ಹೆಬ್ಬಗೋಡಿ ಪ್ರೌಢಶಾಲೆಗೆ  ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಕೋವಿಡ್ 19 ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಟಿಪ್ಸ್ ನೀಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,  ಪೋಷಕರು ಮತ್ತು ಮಕ್ಕಳು ಖುಷಿಯಾಗಿದ್ದಾರೆ. ಬಹಳ ದಿನಗಳ ಬಳಿಕ ಶಾಲೆ ಓಪನ್ ಆಗ್ತಿದೆ. ಕೊರೊನಾ ರೂಪಾಂತರದ ಬಗ್ಗೆ ಭಯ ಬೇಡ. ಅಪಾಯಕಾರಿ ಅಲ್ಲವೆಂದು ತಜ್ಞರು ಹೇಳಿದ್ದಾರೆ. ಈ ವಿಷಯದಲ್ಲಿ ಯಾವುದೇ ಗಡಿಬಿಡಿ ಬೇಡ. ನಿಮಗೆ ಒಪ್ಪಿಗೆ ಇದ್ದು ಕಳಿಸೋದಾದ್ರೆ ಸರಿ. ಇಲ್ಲದಿದ್ರೆ ಆನ್ ಲೈನ್ ಕ್ಲಾಸ್ ನಲ್ಲಿ ಭಾಗಿಯಾಗಲಿ. ನಾವು ಯಾರಿಗೂ ಬಲವಂತ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗನ ಮೇಲಿನ ಬೇಸರಕ್ಕೆ ಅರ್ಧ ಆಸ್ತಿಯನ್ನು ನಾಯಿಗೆ ಬರೆದ ತಂದೆ!