Publish Date: Fri, 01 Jan 2021 (08:12 IST)
Updated Date: Fri, 01 Jan 2021 (08:13 IST)
ಬೆಂಗಳೂರು : ಗೋಮಾತೆಯಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಹಾಗಾಗಿ ಗೋಮಾತೆಯನ್ನು ಪೂಜಿಸಿದರೆ ನಿಮ್ಮ ಜೀವನದ ಕಷ್ಟ, ಸಂಕಟಗಳೆಲ್ಲಾ ದೂರವಾಗಿ ಲಕ್ಷ್ಮಿದೇವಿಯ ಕೃಪೆಯಿಂದ ಸುಖ, ಸಂಪತ್ತು ಪ್ರಾಪ್ತಿಯಾಗುತ್ತದೆ.
ಗೋಮಾತೆ ಕಾಮಧೇನುವಿನ ಸ್ವರೂಪ. ತಾಯಿ ಕಾಮಧೇನು ಎಲ್ಲರ ಇಷ್ಟಾರ್ಥಗಳನ್ನು ಈಡೇರುತ್ತಾಳೆ. ಹಸುವಿನ ಕೊಂಬುಗಳ ಮಧ್ಯೆದಲ್ಲಿ ಶಿವ ಪಾರ್ವತಿಯರು ನೆಲೆಸಿರುತ್ತಾರೆ. ಹಾಗಾಗಿ ಹಸುವಿಗೆ ಪೂಜೆ ಮಾಡುವಾಗ ಕೊಂಬುಗಳ ಮಧ್ಯೆ ವಿಭೂತಿ ಹಚ್ಚಿ ಪೂಜಿಸಿ. ಹಾಗೇ ಹಸುವಿಗೆ ಪ್ರತಿದಿನ ವಿಷ್ಣುವಿಗೆ ಪ್ರಿಯವಾದ ಬಾಳೆಹಣ್ಣನ್ನು ತಿನ್ನಿಸಿದರೆ ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಕಷ್ಟಗಳು ದೂರವಾಗಿ ಸಂತೋಷದ ಜೀವನ ನಿಮ್ಮದಾಗುತ್ತದೆ.