Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

4200 ನೌಕರರ ಅಮಾನತು ವಾಪಸ್ಸು ಪಡೆದ ಶ್ರೀರಾಮುಲು

4200 ನೌಕರರ ಅಮಾನತು ವಾಪಸ್ಸು ಪಡೆದ ಶ್ರೀರಾಮುಲು
bangalore , ಮಂಗಳವಾರ, 21 ಸೆಪ್ಟಂಬರ್ 2021 (21:49 IST)
ಸಾರಿಗೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಮೇ ತಿಂಗಳಲ್ಲಿ ಪ್ರತಿಭಟನೆ ಮಾಡಿದ್ರು. ಆದ್ರೆ ಅವರ ಬೇಡಿಕೆ ಈಡೇರಲಿಲ್ಲ. ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ನಡೆಸಿದ ಸಾರಿಗೆ ನೌಕರರನ್ನ ಅಮಾನತುಗೊಳಿಸಲಾಗಿತ್ತು. ಆದ್ರೆ ಇದೀಗ ನೂತನ ಸಾರಿಗೆ ಸಚಿವರು ಪ್ರತಿಭಟನೆಯಲ್ಲಿ ಅಮಾನತುಗೊಂಡ ನೌಕರರಿಗೆ ಸಿಹಿಸುದ್ದಿ ಕೊಟ್ಟು ಬೇಡಿಕೆ ಈಡೇರಿಕೆಗೆ ಒಲವು ತೋರಿದ್ದಾರೆ.
 
ಕಳೆದ ಮೇ ತಿಂಗಳಲ್ಲಿ ಸಾರಿಗೆ ನಕರರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ರು. ಇದರಿಂದ ಸಾರ್ವಜನಿಕರಿಗೆ ಸಂಚಾರ ಮಾಡಲು ಬಹಳ ಅನಾನುಕೂಲ ಆಯ್ತು. ಈ ಹಿನ್ನೆಲೆ ಸಾರ್ವಜನಿಕರು ಬಿಜೆಪಿ ಸರ್ಕಾರಕ್ಕೆ ಹಿಡಿ ಶಾಪವನ್ನೇ ಹಾಕಿದ್ರು. ಇತ್ತಾ ಸರ್ಕಾರ ವಿಪಕ್ಷಗಳ ಕೆಂಗಣ್ಣಿಗೆ ಗುರಿ ಆಯ್ತು. ಈ ಹಿನ್ನೆಲೆಯಲ್ಲಿ ಮುಷ್ಕರ ನಿಷ್ಕ್ರೀಯಗೋಳಿಸಲು ಸರ್ಕಾರ ಸುಮಾರು 4200 ನೌಕರರನ್ನ ಕೆಲಸದಿಂದ ಅಮಾನತುಗೊಳಿಸಿ ಮುಷ್ಕರಕ್ಕೆ ತೆರೆ ಎಳೆಯ್ತು.ಹೌದು ಸಾರಿಗೆ ನೌಕರರ ಬೇಡಿಕೆ ಇಂದು ನಿನ್ನೆಯದಲ್ಲ ಕಳೆದ ಬಾರಿ ಬಿಜೆಪಿ ಸರ್ಕಾರ ಅಧಿಕಾರ ಬಂದಾಗಲಿಂದ ಸಾರಿಗೆ ನೌಕರರ ಬೇಡಿಕೆ ಈಡೇರಿಸುತ್ತೇವೆ ಎಂದು ಅಂದಿನ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದ್ರು. ಆದ್ರೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನೌಕರರ ಯಾವುದೇ ಬೇಡಿಕೆ ಈಡೇರಿಸದೆ ಆಶ್ವಾಸನೆ ನೀಡುತ್ತಲ್ಲೇ ಬಂತು. ಆದ್ರೆ ಬೇಡಿಕೆ ಈಡೇರಿಸಿಲ್ಲ. ಈ ಹನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಕಳೆದ ಮೇ ತಿಂಗಳಲ್ಲಿ ರಾಜ್ಯಾವ್ಯಾಪಿ ಮುಷ್ಕರ ಹಮ್ಮಿಕೊಂಡ್ರು. ಮುಷ್ಕರದಲ್ಲಿ ನಾಲ್ಕು ನಿಗಮದ ಬಸ್ ಗಳನ್ನ ರಸ್ತೆಗೆ ಇಳಿಯದಂತೆ ಬಂದ್ ಮಾಡಿದ್ರು. ಇದ್ದರಿಂದ ಬಿಜೆಪಿ ಸರ್ಕಾರಕ್ಕೆ ಇರಿಸು-ಮುರಿಸು ಆಯ್ತು. ಆದ್ರೆ  ಸರ್ಕಾರ ಪ್ರತಿಭಟನಾ ನಿರಂತರ ಮೇಲೆ ಪ್ರಬಲ ಅಸ್ತ್ರ ಪ್ರಯೋಗಕ್ಕೆ ಮುಂದಾಯ್ತು. ಆದ್ರು ಕೂಡ ನೌಕರರು ಸರ್ಕಾರಕ್ಕೆ ಸವಾಲಾಗ್ ಪ್ರತಿಭಟನೆ ನಡೆಸಿದ್ರು. ಇತ್ತಾ ಸರ್ಕಾರ ಪ್ರತಿಭಟನೆ ಹತ್ತಿಕ್ಕಲು ಮುಷ್ಕರ ನಿರಂತರ ಮುಖಂಡರು ಸೇರಿದಂತೆ ಸುಮಾರು 4200 ನೌಕರರನ್ನ ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಆದ್ರೆ ಕಳೆದ ಮೂರು ದಿನಗಳ ಹಿಂದೆ ಮತ್ತೆ ಅಮಾನತುಗೊಂಡ ನೌಕರರು  ಪ್ರತಿಭಟನೆ ದಾರಿ ತುಳಿದ್ರು. ನಮ್ಮ ಬೇಡಿಕೆ ಈಡೇರಿಸಬೇಕು, ಅಮಾನತು ಹಿಂಪಡೆಯಬೇಕೆಂದು ಆಗ್ರಹ ಮಾಡಿ ಧರಣಿಗೆ ಮುಂದಾದ್ರು. ಇದ್ದರಿಂದ ವಿಚಲಿತರಾದ ನೂತನ ಸಾರಿಗೆ ಸಚಿವ ಶ್ರೀರಾಮುಲು ಸಾರಿಗೆ ಮುಂಖಡರ ಜೊತೆ ಸಭೆ ನಡೆಸಿ ಅಮಾನತುಗೊಂಡಿದ್ದ 4200 ನೌಕರರ ಅಮಾನತು ಆದೇಶ ಹಿಂಪಡೆದ್ರು.
 
ನೌಕರರ ಹಲವು ಬೇಡಿಕೆಗಳು ಹಾಗೂ ಸಮಸ್ಯೆಗಳನ್ನ ಬಗೆಹರಿಸ್ತೀನಿ . ಸಾರಿಗೆ ಇಲಾಖೆಯಲ್ಲಿ ಏನಾದ್ರು ಆದ್ರೆ  ನಾನೇ ಹೊಣೆ ಹೊರುತ್ತೇನೆ. ಸದ್ಯಕ್ಕೆ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಹೊಸ ಬಸ್ ಖರೀದಿಸಲು ಆಗುವುದಿಲ್ಲ. ನೌಕರರು ನನ್ನ ಮೇಲೆ ನಂಬಿಕೆ ಇಡಬೇಕು. ತಮ್ಮ ಬೇಡಿಕೆಗಳನ್ನ  ಹಂತ ಹಂತವಾಗಿ  ಸಿಎಂ ಜೊತೆ ಮಾತಾನಾಡಿ  ಬಗೆಹರಿಸುತ್ತೇನೆ. ಇನ್ನೂ ಶಾಲಾ ಮಕ್ಕಳಿಗಾಗಿ ವಿಶೇಷ ಬಸ್ ಸೇವೆಗಳನ್ನ ಕಲ್ಪಿಸುತ್ತೇನೆ ಎಂದು ನೌಕರರಿಗೆ ಭರವಸೆ ನೀಡಿದ್ರು.ಒಟ್ಟಾರೆಯಾಗಿ ನೂತನ ಸಾರಿಗೆ ಸಚಿವರ ಭರವಸೆಯಿಂದ ಸಾರಿಗೆ ನೌಕರರು ಫುಲ್ ಖುಷ್ ಆಗಿದ್ದಾರೆ. ಇನ್ನೂ ಇಲಾಖೆ ಆರ್ಥಿಕ ಮುಗಟ್ಟಿನಿಂದ ಮತ್ತೆ ಪುಟ್ಟಿದೇಳುತ್ತಾ ? ಎಂಬುದೇ ಮಿಲಿಯಾನ್ ಡಾಲರ್  ಪ್ರಶ್ನೆ ...

Share this Story:

Follow Webdunia kannada

ಮುಂದಿನ ಸುದ್ದಿ

ಭೂಸ್ವಾಧೀನಾಧಿಕಾರಿ ತೇಜಸ್ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ