ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಬೆಳಗ್ಗೆ 11.30ರ ಒಳಗೆ ರಶೀದಿಯನ್ನು ಪಡೆದುಕೊಳ್ಳತಕ್ಕದ್ದು.
ಸಮಯ ಮೀರಿ ಬಂದ ಭಕ್ತಾದಿಗಳಿಗೆ ವೈಯುಕ್ತಿಕ ಪೂಜಾ ಸೇವೆ ಮಾಡಿಸುವ ಅವಕಾಶವಿರುವುದಿಲ್ಲ.
ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸುವುದು. ಸಾಂಪ್ರದಾಯಿಕವಲ್ಲದ ಅಶ್ಲೀಲ ಉಡುಗೆ-ತೊಡುಗೆಗಳಲ್ಲಿ ಆಗಮಿಸುವರಿಗೆ ಆಡಳಿತ ಮಂಡಳಿಯಿಂದ ಕಠಿಣ ನಿರ್ಬಂಧ ಹೇರಲಾಗಿದೆ.
ದೇವಸ್ಥಾನಕ್ಕೆ ಮುಂಗಡ ಕರೆ ಮಾಡಿ ವಿವಿಧ ಪೂಜಾ ಸೇವೆಗಳನ್ನು ಬುಕ್ಕಿಂಗ್ ತೆಗೆದುಕೊಂಡು ಬರುವ ಭಕ್ತಾದಿಗಳು ಕಛೇರಿಯ 8197870058 ಈ ಮೊಬೈಲ್ ಸಂಖ್ಯೆಗೆ ಬೆಳಗ್ಗೆ 9ರಿಂದ ಮಧ್ಯಾನ್ಹ 3ಗಂಟೆಯ ಒಳಗೆ ಸಂಪರ್ಕ ಮಾಡುವುದು. ಇದೇ ಸಂಪರ್ಕ ಸಂಖ್ಯೆಗೆ ಆನ್‌ಲೈನ್ ಗೂಗಲ್ ಪೇ ಸೌಕರ್ಯ ಕೂಡ ಇರುತ್ತದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಲ್ಯಮೀದೇರೀರ ಸುರೇಶ ಹಾಗೂ ಕಾರ್ಯದರ್ಶಿ ಅಣ್ಣೀರ ಪ್ರತೀಕ್ ಪೊನ್ನಣ್ಣನವರು ಮಾಹಿತಿ ನೀಡಿರುತ್ತಾರೆ.