Publish Date: Tue, 30 Jul 2019 (17:55 IST)
Updated Date: Tue, 30 Jul 2019 (17:57 IST)
ಮಾಜಿ ಸಿಎಂ ಎಸ್.ಎಂ.ಕೃಷ್ಣರ ಅಳಿಯ ಹಾಗೂ ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗಡೆ ಪತ್ತೆಗಾಗಿ ವಿಶೇಷ ಮುಳುಗು ತಜ್ಞರು ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದೆ.
ನಿನ್ನೆ ರಾತ್ರಿ 8 ಗಂಟೆಗೆ ಹೊತ್ತಿಗೆ ನೇತ್ರಾವತಿ ನದಿ ಬ್ಯಾರೇಜ್ ಬಳಿಯಿಂದ ಸಿದ್ದಾರ್ಥ್ ಅನುಮಾನಾಸ್ಪದವಾಗಿ ಕಾಣೆಯಾಗಿದ್ದರು. ನೇತ್ರಾವತಿ ನದಿಯಲ್ಲಿ ವ್ಯಕ್ತಿಯೊಬ್ಬ ಜಿಗಿದದ್ದನ್ನು ನೋಡಿದ್ದೇನೆ ಅಂತ ಸ್ಥಳೀಯ ಮೀನುಗಾರನೊಬ್ಬ ತಿಳಿಸಿದ್ದರಿಂದಾಗಿ, ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿರಬಹುದಾ? ಅನ್ನೋ ಅನುಮಾನ ವ್ಯಕ್ತವಾಗತೊಡಗಿವೆ.
ನೇತ್ರಾವತಿ ನದಿಯಲ್ಲಿ ಎರಡು ವಿಶೇಷ ಬೋಟ್ ಗಳು ಅಲ್ಲದೇ ಸ್ಥಳೀಯ ಬೋಟ್ ಗಳು ಸಿದ್ದಾರ್ಥ್ ಪತ್ತೆ ಕಾರ್ಯದಲ್ಲಿ ತೊಡಗಿವೆ. ಕಾರವಾರ ಕದಂಬ ನೌಕಾನೆಲೆಯಿಂದ ವಿಶೇಷ ಮುಳುಗು ತಜ್ಞರ ತಂಡ ಶೋಧ ಕಾರ್ಯದಲ್ಲಿ ತೊಡಗಿದೆ.