Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

KPSC ಪರೀಕ್ಷೆ ಅಕ್ರಮ: ಮತ್ತಿಬ್ಬರು ಆರೋಪಿಗಳ ಬಂಧನ

KPSC ಪರೀಕ್ಷೆ ಅಕ್ರಮ: ಮತ್ತಿಬ್ಬರು ಆರೋಪಿಗಳ ಬಂಧನ
ದಾವಣಗೆರೆ , ಮಂಗಳವಾರ, 30 ಜುಲೈ 2019 (17:17 IST)
ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳ  ಬಂಧನ ಮಾಡಲಾಗಿದ್ದು,  ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 16 ಕ್ಕೆ ಏರಿಕೆಯಾದಂತಾಗಿದೆ.  

ದಾವಣಗೆರೆ ಸಿಇಎನ್  ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನು ಬಂಧನ ಮಾಡಿದ್ದಾರೆ.
ಹುಬ್ಬಳ್ಳಿ ರೇಲ್ವೆ ಪೊಲೀಸ್ ಠಾಣೆಯ ಪೇದೆ ಮಂಜುನಾಥ, ದಾವಣಗೆರೆ ನಗರದ ನಿಟ್ಟುವಳ್ಳಿ ನಿವಾಸಿ ರಾಜಪ್ಪ ಬಂಧಿತ ಆರೋಪಿಗಳಾಗಿದ್ದಾರೆ.

ಮೈಕ್ರೋ ಪೋನ್ ಮೂಲಕ ಕೆಪಿಎಸ್ಸಿ ಪರೀಕ್ಷೆಯಲ್ಲಿ ನಕಲು ನಡೆದಿತ್ತು. ಇವರ ಜಾಲ ರಾಜ್ಯಾದ್ಯಂತ ಹರಡಿದ ಶಂಕೆ ವ್ಯಕ್ತವಾಗಿದೆ.
2017 ಅಕ್ಟೋಬರ್ 16 ರಂದು ದಾವಣಗೆರೆ ನಗರದ ನೂತನ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ಪತ್ತೆ ಆಗಿದ್ದ ಪ್ರಕರಣ ಇದಾಗಿದೆ. ಮೊನ್ನೆಯಷ್ಟೆ ಮೂವರು ಆರೋಪಿಗಳನ್ನ ಬಂಧಿಸಿದ್ದರು ಪೊಲೀಸರು. 

ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ದೈಹಿಕ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ  ಮೈಕ್ರೋ ಪೋನ್ ಬಳಸಿ ನಕಲು ಮಾಡಿದ ಪ್ರಕರಣ ಇದಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಬಿಲ್ ಪಾವತಿಸಿ ಅಂದದ್ದಕ್ಕೆ ಹೀಗಾ ಮಾಡೋದು?