Publish Date: Wed, 02 Nov 2022 (15:49 IST)
Updated Date: Wed, 02 Nov 2022 (15:57 IST)
ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಹಾಗೂ ನಟ ಸೃಜನ್ ಲೋಕೇಶ್ ಟೀಂ ನಡುವೆ ಬೆಂಗಳೂರಿನ ಕ್ಲಬ್ವೊಂದರನಲ್ಲಿ ಗಲಾಟೆ ನಡೆದಿದೆ ಎಂದು ಹೇಳಲಾಗ್ತಿದೆ. ವಸತಿ ಸಚಿವ V. ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಬೆಂಗಳೂರಿನ ಮುದ್ದಿನಪಾಳ್ಯದಲ್ಲಿರುವ ಕ್ಲಬ್ ಒಂದರಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸೋಮವಾರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೃಜನ್ ಲೋಕೇಶ್ ಟೀಂ ನಿತ್ಯ ಅಪ್ಪು ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್ಗಾಗೊ ಪ್ರಾಕ್ಟೀಸ್ ನಡೆಸ್ತಿತ್ತು. ಮೊನ್ನೆ ರಾತ್ರಿ ಪಾರ್ಟಿ ವೇಳೆ ಸೃಜನ್ ಲೋಕೇಶ್ ಟೀಮ್ ಕಿರುಚಾಡಿದ್ದು, ಈ ವೇಳೆ ಯಾಕೆ ಗಲಾಟೆ ಮಾಡ್ತೀರಾ ಎಂದು ಅರುಣ್ ಕೇಳಿದ್ದಾರೆ. ಆಗ ಎರಡೂ ತಂಡಗಳ ನಡುವೆ ಗಲಾಟೆಯಾಗಿದೆ ಎಂದು ಹೇಳಲಾಗುತ್ತಿದೆ. ನಟ ಸೃಜನ್ ಲೋಕೇಶ್ ಸ್ಥಳದಲ್ಲೇ ಇದ್ರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಯಾರೂ ಕೂಡ ಇದುವರೆಗೆ ದೂರು ದಾಖಲಿಸಿಲ್ಲ.