ನಂಭೋಮಂಡಲದಲ್ಲಿ ಇವತ್ತು ಮತ್ತೊಂದು ಕೌತುಕ ನಡೆಯಲಿದೆ. ಚಂದ್ರಗ್ರಹಣದ ಬಳಿಕ ಇವತ್ತು ಸೂರ್ಯನಿಗೂ ಗ್ರಹಣ ಹಿಡಿಯಲಿದೆ. ಇದು ಸಂಪೂರ್ಣ ಸೂರ್ಯಗ್ರಹಣವಾಗಿದ್ದು, ಅಮೆರಿಕದಲ್ಲಿ ಮಾತ್ರ ಗೋಚರಿಸಲಿದೆ.
ಅಮೆರಿಕದ ಕಾಲಮಾನದ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಒರೆಗಾನ್`ನಲ್ಲಿ ಆರಂಭವಾಗಲಿರುವ ಸೂರ್ಯಗ್ರಹಣ 4 ಗಂಟೆವರೆಗೆ ಇರಲಿದೆ. ಈ ಸಮಯದಲ್ಲಿ ಚಂದ್ರ ಸಂಪೂರ್ಣ ಸೂರ್ಯನನ್ನ ಮರೆಮಾಚಲಿದ್ದಾನೆ. ಈ ಕತ್ತಲು ಅಮೆರಿಕದ ಕೆಲ ಭಾಗ ಕತ್ತಲಲ್ಲಿ ಮುಳುಗುವ ಸಾಧ್ಯತೆ ಇದೆ. 1918ರಲ್ಲಿ ಇದೇ ರೀತಿ ಅಮಾವಾಸ್ಯೆಯಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿತ್ತು. ಇದಾದ ಬಳಿಕ ಅದೇ ರೀತಿಯ ಗ್ರಹಣ ಇವತ್ತು ಸಂಭವಿಸುತ್ತಿದ್ದು, ಹಗಲಲ್ಲೆ ಅಮೆರಿಕ ಕತ್ತಲಲ್ಲಿ ಮುಳುಗಲಿದೆ.
ಸೂರ್ಯಗ್ರಹಣದ ಸಂದರ್ಭ ಸುನಾಮಿ, ಭೂಕಂಪನದ ಪ್ರಾಕೃತಿಕ ವಿಕೋಪ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಇನ್ನೂ ಗ್ರಹಣದ ಪರಿಣಾಮ ಭಾರತದ ಮೇಲೆ ಪರೋಕ್ಷವಾಗಿ ಇರಲಿದೆ.ನೇರವಾಗಿ ಯಾವುದೇ ಪ್ರಭಾವವಿಲ್ಲ ಎನ್ನುತ್ತಾರೆ ಜ್ಯೋತಿಷಿಗಳು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ