Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಗರ ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಏಳು ವರ್ಷದ ಬಾಲಕಿಯೊಬ್ಬಳು ವಿಶೇಷ ರೀತಿಯಲ್ಲಿ ಮನವಿ ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ನಗರದಲ್ಲಿ ಎರಡನೇ ತರಗತಿ ಓದುತ್ತಿರುವ ಏಳು ವರ್ಷದ ಎಲ್.ಧವನಿ ಯ ಸಾಮಾಜಿಕ ಕಳಕಳಿಗಾಗಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿದ್ದಾಳೆ.
ನಮ್ಮ ಬೆಂಗಳೂರಲ್ಲಿ ರಸ್ತೆಗಳೆ ಸರಿಯಿಲ್ಲ. ಎಲ್ಲೇದರಲ್ಲಿ ಗುಂಡಿಗಳು ಬಿದ್ದಿವೆ. ಅದರಿಂದ ಸುಮಾರು ಜನ ಸಾವನ್ನಪ್ಪುತ್ತಿದ್ದಾರೆ. ಅವರು ಸತ್ತರೆ ಅವರ ಕುಟುಂಬದವರು ಹೇಗೆ ಜೀವನ ಮಾಡ್ತಾರೆ ನೀವೆ ಹೇಳಿ ತಾತ ಎಂದು ಸಿಎಂ ಅವರಲ್ಲಿ ಧವನಿ ಪ್ರಶ್ನಿಸಿದ್ದಾಳೆ. ಆ ಗುಂಡಿಗಳನ್ನು ಬೇಗ ಮುಚ್ಚಿಸಿ ಅವರ ಜೀವಗಳನ್ನ ಉಳಿಸಿ ತಾತ ಎಂದು ಧವನಿ ಬೇಡಿಕೊಂಡಿದ್ದು, ಗುಂಡಿಗಳಿಂದಾಗಿ ಅನೇಕ ಬಾರಿ ತಾನು ಬೈಕ್ನಿಂದ ಬಿದ್ದಿದ್ದೆ.