Publish Date: Mon, 25 Oct 2021 (14:46 IST)
Updated Date: Mon, 25 Oct 2021 (14:48 IST)
ವಿಜಯಪುರ : ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಯಾವುದೇ ಕೆಲಸಗಳೂ ನಿಂತಿಲ್ಲ. ಎಲ್ಲವೂ ಎಂದಿನಂತೆ ಮುನ್ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧಕ್ಕೆ ಬೀಗ ಜಡಿದು ಸಚಿವರೆಲ್ಲಾ ಪ್ರಚಾರಕ್ಕೆ ಬಂದಿದ್ದಾರೆ ಎಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಅವರು ಹಿಂದೆ ಏನೆಲ್ಲಾ ಮಾಡಿದ್ದಾರೆ ಎಂಬುದು ನಮಗೂ ಗೊತ್ತಿದೆ. ನಾನು ಸಚಿವರಿಗೆ ಏನು ಸೂಚನೆ ಕೊಡಬೇಕೋ ಕೊಟ್ಟಿದೇನೆ. ಯಾವುದೇ ಕೆಲಸಗಳು ನಿಂತಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಾದೇಶಿಕ ಪಕ್ಷವನ್ನು ಬಿಜೆಪಿ, ಕಾಂಗ್ರೆಸ್ ಮುಗಿಸುತ್ತವೆ ಎಂಬ ದೇವೇಗೌಡರ ಹೇಳಿಕೆಗೂ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಜೆಡಿಎಸ್ ಅನ್ನು ಮುಗಿಸುವ ಪ್ರಶ್ನೆ ಇಲ್ಲ, ನಮ್ಮ ಪಕ್ಷದ ಸಂಘಟನೆ ಮಾತ್ರ ನಾವು ಮಾಡುತ್ತಿದ್ದೇವೆ. ಇನ್ನೊಂದು ಪಕ್ಷದ ಕಡೆಗೆ ನಾವು ತಿರುಗಿಯೂ ನೋಡುವುದಿಲ್ಲ ಎಂದು ತಿಳಿಸಿದರು.