Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಬೆಸ್ಕಾಂ ವಾಟ್ಸಾಪ್ ಸಹಾಯವಾಣಿಗೆ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, ಕೇವಲ ಒಂದೇ ವಾರದಲ್ಲಿ 736 ದೂರುಗಳು ಸಲ್ಲಿಕೆ ಆಗಿವೆ.
ವಿದ್ಯುತ್ ಸಂಬಂಧಿತ ದೂರುಗಳಿಗೆ ಬೆಸ್ಕಾಂ ವಾಟ್ಸಾಪ್ ಸಹಾಯವಾಣಿ ಪ್ರಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಬೆಸ್ಕಾಂನ 8 ಜಿಲ್ಲೆ, 11 ವಾಟ್ಸಪ್ ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ವಾಟ್ಸಾಪ್ ಸಹಾಯವಾಣಿಯ ಮುಖಾಂತರ ಈ ಒಂದು ವಾರದಲ್ಲಿ 736 ದೂರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 628 ದೂರುಗಳನ್ನು ಬೆಸ್ಕಾಂ ಬಗೆಹರಿಸಿದೆ.
ಮೇ 24ರಂದು ಇಂಧನ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ಬೆಸ್ಕಾಂ ವಾಟ್ಸಾಪ್ ಸಹಾಯವಾಗಿ ಸಹಾಯವಾಣಿಯನ್ನು ಬಿಡುಗಡೆ ಮಾಡಿದ್ದರು.
ಇದರ ಬೆನ್ನಲ್ಲೇ ಕಳೆದ ಒಂದು ವಾರದಲ್ಲಿ ಬೆಸ್ಕಾಂನ 1912 ಸ್ಥಿರ ಸಹಾಯವಾಣಿ ಸಾಲು ಸಾಲು ಕರೆ ಬರುತ್ತಿದ್ದು, ಬರೋಬ್ಬರಿ 74,744 ದೂರುಗಳು ಗ್ರಾಹಕರಿಂದ ಸಲ್ಲಿಕೆ ಆಗಿದೆ. ಈ ಪೈಕಿ ಬೆಸ್ಕಾಂ 71,105 ದೂರುಗಳನ್ನು ಬಗೆಹರಿಸಿದೆ.