Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಣ್ಣ ಬಣ್ಣದ ಜಾಹೀರಾತು ಕೊ ಟ್ಟು ಸುಳ್ಳು ಹೇಳಿದ ಬಿಜೆಪಿ, ಎರಡೂವರೆ ವರ್ಷದಲ್ಲಿ ಏನೇನು ಮಾಡಿದ್ದಾರೆ. ಇದರ ಬಗ್ಗೆ ಬೊಮ್ಮಾಯಿ ಅವರು ವಿವರಣಾತ್ಮಕವಾಗಿ ಹೇ ಳಬೇಕಿತ್ತು.
ಕೋವಿಡ್ ಮೇಲೆ ಹೇಳಿಕೆ ಮೇಲೆ ಹೇಳಿಕೆ ಕೊಡ್ತಾರೆ. ಎರಡನೇ ಅಲೆಯಲ್ಲಿ ವೆಂಟಿಲೇಟರ್, ಆಕ್ಸಿ ಜನ್, ಮೆಡಿಸನ್ ಯಾವುದೇ ಕೊಡದೇ ನಿರ್ಲಕ್ಷ್ಯ ವಹಿಸಿದರು. ಮೂರು ವರೆ ಲಕ್ಷ ಜನರು ಕೋವಿಡ್ ನಿಂದ ಸಾವನ್ನಪ್ಪಿದರು, ಆದರೆ ಇವರು 28 ಸಾವಿರ ಸತ್ತವರ ಸಂಖ್ಯೆ ಎಂದು ಹೇಳಿತು ಇದಕ್ಕೆಲ್ಲಾ ಯಾರು ಹೊಣೆ ಎಂದು ಕಿಡಿಕಾರಿದರು.
ಇನ್ನೂ ಕೋವಿಡ್ ಗೆ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಸತ್ತಿದ್ದಾರೆ, ಇದರ ಬಗ್ಗೆ ನೈಜ ವರದಿ ಇನ್ನೂ ಕೊಟ್ಟಿಲ್ಲ. ಅಲ್ಲದೇ ಕೋವಿಡ್ ನಿಂದ ಸತ್ತ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ 50 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ 1 ಲಕ್ಷ ಕೊಡುತ್ತೇವೆ ಎಂದಿದ್ದರು. ಆದರೆ ಇದು ವರೆಗೂ 13,541 ಜನರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಬಿಜೆಪಿಯ ಸುಳ್ಳು ಭರವಸೆಗಳಿಂದ ಜನ ಬೇಸತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.