Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇಶದಲ್ಲಿ ಒಮಿಕ್ರಾನ್ ಉಪ ರೂಪಾಂತರ 'ಬಿಎ.2' ಹೆಚ್ಚು ಹರಡುತ್ತಿದೆ : ಕೇಂದ್ರ ಸರ್ಕಾರ ಕಳವಳ

ದೇಶದಲ್ಲಿ ಒಮಿಕ್ರಾನ್ ಉಪ ರೂಪಾಂತರ 'ಬಿಎ.2' ಹೆಚ್ಚು ಹರಡುತ್ತಿದೆ : ಕೇಂದ್ರ ಸರ್ಕಾರ ಕಳವಳ
bangalore , ಶುಕ್ರವಾರ, 28 ಜನವರಿ 2022 (14:06 IST)
ಕೋವಿಡ್-19ರ ಮೂರನೇ ಅಲೆಯಲ್ಲಿ ಭಾರತ ಹೋರಾಡುತ್ತಿರುವಂತೆಯೇ, ಕೇಂದ್ರ ಸರ್ಕಾರ ಗುರುವಾರ ಒಮಿಕ್ರಾನ್ ಉಪ ರೂಪಾಂತರ ಬಿಎ.2(Omicron sub-variant BA.2) ದೇಶದಲ್ಲಿ ಈಗ ಹೆಚ್ಚು ಪ್ರಚಲಿತದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ದೇಶದ ಕೋವಿಡ್-19 ಪರಿಸ್ಥಿತಿಯ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯ ಈ ಮಾಹಿತಿ ನೀಡಿದೆ.
ಇನ್ನು ಈ ಬಗ್ಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ನಿರ್ದೇಶಕ ಡಾ. ಸುಜೀತ್ ಕುಮಾರ್ ಸಿಂಗ್ ಅವರು ಮಾತನಾಡುತ್ತಿದಾಗ, ಒಮಿಕ್ರಾನ್ ಉಪ ರೂಪಾಂತರ ಬಿಎ.2(Omicron sub-variant BA.2) ದೇಶದಲ್ಲಿ ಈಗ ಹೆಚ್ಚು ಹರಡುತ್ತಿದೆ ಎಂದು ಹೇಳಿದರು.
ಕಳೆದ ವರ್ಷ ಡಿಸೆಂಬರ್ ನಲ್ಲಿ ಜಿನೋಮ್ ಅನುಕ್ರಮಣಿಕೆಯಲ್ಲಿ 1,292 ಒಮಿಕ್ರಾನ್ ರೂಪಾಂತರ ಪ್ರಕರಣಗಳು ಕಂಡುಬಂದಿವೆ ಎಂದು ಸರ್ಕಾರ ತಿಳಿಸಿದ್ದು, ಜನವರಿಯಲ್ಲಿ ಈ ಸಂಖ್ಯೆ 9,672ಕ್ಕೆ ಏರಿದೆ ಎಂದು ತಿಳಿಸಿದೆ.
ಹಿಂದಿನ ಏರಿಕೆಗಳಿಗೆ ಹೋಲಿಸಿದ್ರೆ ಪ್ರಸ್ತುತ ಅಲೆಯ ಸಮಯದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು ಅನುಗುಣವಾದ ಸಾವುಗಳು ತುಂಬಾ ಕಡಿಮೆ ಎಂದು ಸರ್ಕಾರ ಹೇಳಿದೆ.
ಮುನ್ನೆಚ್ಚರಿಕೆಗಳನ್ನು ಮುಂದುವರಿಸಬೇಕಾಗಿದೆ ಎಂದು ಪ್ರತಿಪಾದಿಸಿದ ಸರ್ಕಾರ, ಕೋವಿಡ್ ಪ್ರಕರಣಗಳ ಆರಂಭಿಕ ಸೂಚನೆಯನ್ನ ಕೆಲವು ಸ್ಥಳಗಳಲ್ಲಿ ವರದಿ ಮಾಡಲಾಗಿದೆ ಎಂದು ತಿಳಿಸಿದ್ದು, ಈ ಪ್ರವೃತ್ತಿಯನ್ನು ಗಮನಿಸಬೇಕಾಗಿದೆ ಎಂದು ಹೇಳಿದೆ.
ಸಕ್ರಿಯ ಕೋವಿಡ್ ಪ್ರಕರಣಗಳ ವಿಷಯದಲ್ಲಿ ಅಗ್ರ 10 ರಾಜ್ಯಗಳು ದೇಶದ ಒಟ್ಟು ಸಕ್ರಿಯ ಸೋಂಕುಗಳಲ್ಲಿ ಶೇಕಡಾ 77ಕ್ಕೂ ಹೆಚ್ಚು ಹೊಂದಿವೆ ಎಂದು ಸರ್ಕಾರ ಹೇಳಿದೆ. ಅವುಗಳೆಂದ್ರೆ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಆಂಧ್ರಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚು ದಾಖಲಿಸಲ್ಪಡುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾನದಂಡ ರೂಪಿಸಲು ಸುಪ್ರೀಂ ನಿರಾಕರಣೆ?