Publish Date: Tue, 24 Sep 2019 (11:22 IST)
Updated Date: Tue, 24 Sep 2019 (11:23 IST)
ಹುಬ್ಬಳ್ಳಿ: ಬಿಜೆಪಿಗೆ ವೋಟು ಹಾಕುವಂತೆ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ ಎಂಬ ಜಿಟಿ ದೇವೇಗೌಡರ ಹೇಳಿಕೆ ಇಟ್ಟುಕೊಂಡು ಹೆಚ್ ಡಿಕೆಗೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಗೆ ಮತ ಹಾಕಿಸುವಂತೆ ಕುಮಾರಸ್ವಾಮಿ ಹೇಳಿದ್ರು ಎಂದು ಜಿಟಿಡಿಯವರೇ ಹೇಳಿದ್ದಾರೆ. ಇದು ಯಾರ ನಾಟಕ ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ದು ಸರಿಯಾಗಲಿಲ್ಲ, ನಾವು ಮಾಡಿದ್ದು ಸರಿ ಇತ್ತು ಎಂದು ಕುಟುಕಿದ್ದಾರೆ.
ಸಮ್ಮಿಶ್ರ ಸರ್ಕಾರ ಕೆಟ್ಟದಾಗಿತ್ತೆಂದು ಅವರೇ ಒಪ್ಪಿಕೊಂಡಿದ್ದಾರೆ. ಅದಕ್ಕೆ ನಾನೇನು ಹೇಳಲಿ. ಉಪ ಚುನಾವಣೆಯ ಹಿನ್ನಲೆಯಲ್ಲಿ ಹೀಗೆ ಮಾತನಾಡ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಪಕ್ಷಾಂತರಿಗಳನ್ನು ಸೋಲಿಸಲು ಜನರು ತೀರ್ಮಾನಿಸಿದ್ದಾರೆ. ಪಕ್ಷ ಕೂಡ ಇದಕ್ಕೆ ಎಲ್ಲರೀತಿಯ ಸಿದ್ದತೆ ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
pavithra
Publish Date: Tue, 24 Sep 2019 (11:22 IST)
Updated Date: Tue, 24 Sep 2019 (11:23 IST)